ಲೂಟಿ, ರಾಜಕೀಯ ಅಪರಾಧಗಳಿಗಾಗಿ ಬ್ರಿಟಿಷರಿಂದ ಕಠಿಣ ಶಿಕ್ಷೆಗೆ ಗುರಿಯಾಗಿದ್ದರು ಕಿಶನ್ ಅಹಿರ್ 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಿಶನ್ ಅಹಿರ್ ಅವರು ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಅಜಂಗಢ್ ಗ್ರಾಮದಲ್ಲಿ 1908 ರಲ್ಲಿ ಜನಿಸಿದರು. ಕ್ವಿಟ್ ಇಂಡಿಯಾ ಚಳವಳಿಯು ತೀವ್ರ ಸ್ವರೂಪದಲ್ಲಿದ್ದಾಗ ಕಾಂಗ್ರೆಸ್ಸಿಗರು ತಮ್ಮ ಕಾರ್ಯಕರ್ತರೊಂದಿಗೆ ಬ್ರಿಟಿಷ್ ಆಡಳಿತ, ಪೊಲೀಸ್, ರೈಲ್ವೆ ಮತ್ತು ಪೋಸ್ಟ್ ಇಲಾಳೆ ಹಾಗೂ ಟೆಲಿಗ್ರಾಫ್ ಸೇವೆಗಳ ವಿರುದ್ಧ ಚಳುವಳಿಗಳನ್ನು ಪ್ರಾರಂಭಿಸಿದರು.
ಕ್ರಾಂತಿಕಾರಿಗಳು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಸರ್ಕಾರಿ ಆಸ್ತಿಯನ್ನು ನಾಶಪಡಿಸಿದರು. ಜೊತೆಗೆ ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಬೆಂಬಲಿಗರ ಆಸ್ತಿಪಾಸ್ತಿಗಳನ್ನು ಲೂಟಿ ಮಾಡಿದರು. ಅಹಿರ್ ಅವರು 18 ಆಗಸ್ಟ್ 1942 ರಂದು 500 ರಿಂದ 600 ಜನರ ಗುಂಪಿನೊಂದಿಗೆ ಮಹಾರಾಜ್‌ಗಂಜ್ ಪೊಲೀಸ್ ಠಾಣೆ, ಉಪ ಅಂಚೆ ಕಚೇರಿ, ಮದ್ಯದ ಅಂಗಡಿ ಮತ್ತು ಮಹಾರಾಜ್‌ಗಂಜ್ ಪಟ್ಟಣದ ಇತರ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಆ ಬಳಿಕ ಗುಂಪಿನೊಂದಿಗೆ ಟ್ಯಾಂಕೂ ಪೊಲೀಸ್ ಠಾಣೆಯ ಮೇಲೆ ಕಾಂಗ್ರೆಸ್ ಧ್ವಜವನ್ನು ಹಾರಿಸಿದರು. ಉಪ ಅಂಚೆ ಕಚೇರಿ, ಮದ್ಯದ ಅಂಗಡಿ ಮತ್ತು ಇತರ ಅಂಗಡಿಗಳನ್ನು ಲೂಟಿ ಮಾಡಿದರು. ರಾಜಕೀಯ ಅಪರಾಧ, ಲೂಟಿ, ಡಕಾಯಿತಿ ಆರೋಪದ ಮೇಲೆ ಕ್ರಿಶನ್ ಅಹಿರ್ ಅವರನ್ನು ಭಾರತೀಯ ದಂಡ ಸಂಹಿತೆ 395 ರ  ಅಡಿಯಲ್ಲಿ 29 ಫೆಬ್ರವರಿ 1944 ರಂದುಅಪರಾಧಿ ಎಂದು ಘೋಷಿಸಿ ಅಜಂಗಢದ ಸೆಷನ್ ನ್ಯಾಯಾಧೀಶರು 3 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!