ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ ನಲ್ಲಿ ಅತ್ಯುತ್ತಮವಾಗಿ ಆಡಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ನೇರವಾಗಿ ಪ್ರವೇಶಿಸಿದ ಸಾನ್ಯಾ ಅಯ್ಯರ್ ಇಂದು ದೊಡ್ಡಮನೆಯಿಂದ ಹೊರಬಂದಿದ್ದಾರೆ.
ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಬಾಲನಟಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಸಾನ್ಯ ಅಯ್ಯರ್, ಬಳಿಕ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿಎಲ್ಲರಿಗು ಚಿರಪರಿಚಿತರಾಗಿದ್ದರು.
ಬಳಿಕ ಬಿಗ್ ಬಾಸ್ ಓಟಿಟಿ ಸೀಸನ್ 1ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿ , ಫಿನಾಲೆ ಹಂತ ತಲುಪಿ 50 ದಿನ ಪೂರೈಸಿ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ನೇರವಾಗಿ ಪ್ರವೇಶಿಸಿದ್ದಾರೆ. ಇದೀಗ ಅಲ್ಲಿ 42 ದಿನಗಳನ್ನು ಪೂರೈಸಿ ಕಡಿಮೆ ವೋಟ್ಗಳನ್ನು ಪಡೆದ ಕಾರಣ ಎಲಿಮಿನೇಟ್ ಆಗಿದ್ದಾರೆ.
ಇನ್ನೊಂಡೆ ಬಿಗ್ ಬಾಸ್ ಓಟಿಟಿಯಿಂದ ಸಾನ್ಯಾ ಮತ್ತು ಗೆಳೆಯ ರೂಪೇಶ್ ಶೆಟ್ಟಿ ಕಾಂಬಿನೇಷನ್ ಸೂಪರ್ ಡೂಪರ್ ಆಗಿತ್ತು. ಸದಾ ಜೊತೆ ಇರುತ್ತಿದ್ದರು. ಇದೀಗ ಸಾನ್ಯ ಅಯ್ಯರ್ ಮನೆಯಿಂದ ಹೊರ ಬಂದಿರುವ ರೂಪೇಶ್ ಶೆಟ್ಟಿ ಸಹಿತ ಮನೆ ಮಂದಿಗೆ ಶಾಕ್ ನೀಡಿದೆ.