Tuesday, December 6, 2022

Latest Posts

65 ಕೋಟಿಯ ಮನೆ ಖರೀದಿಸಿದ ಜಾನ್ವಿ ಕಪೂರ್:‌ ವರ್ಷಕ್ಕೊಂದು ಸಿನೆಮಾ ಮಾಡಿ ಇಷ್ಟೊಂದು ಹಣ ಹೇಗೆ ಸಂಪಾದಿಸ್ತೀರಿ ಎಂದು ಕಾಲೆಳೆದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್‌ ತಾರೆ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್‌ ಈಗ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಾಪರಾಜಿಗಳ ಕ್ಯಾಮರಾದಲ್ಲಿ ಊಪ್ಸ್‌ ಮುಮೆಂಟ್‌ ಗೆ ತುತ್ತಾಗಿ ಚರ್ಚೆಯಲ್ಲಿದ್ದರು. ಈಗ ಅವರು ಮುಂಬೈನಲ್ಲಿ 65 ಕೋಟಿ ರೂಪಾಯಿ ಮೌಲ್ಯದ ಐಶಾರಾಮಿ ಮನೆಯೊಂದನ್ನು ಖರೀದಿಸಲು ಮುಂದಾಗಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೋನೀ ಕಪೂರ್‌ ಪುತರಿಯಾಗಿರುವ ಜಾನ್ವಿ ಇದುವರೆಗಿನ ತಮ್ಮ ಕರಿಯರ್‌ ನಲ್ಲಿ ಹೇಳಿಕೊಳ್ಳುವಷ್ಟು ಸಿನೆಮಾಗಳನ್ನು ಮಾಡಿಲ್ಲ. ವರ್ಷಕ್ಕೆ ಒಂದು. ಅವರ ಅಭಿನಯದ ಸಿನೆಮಾ ಬರುತ್ತದೆ. ಕೆಲ ಮೆಚ್ಚುಗೆಗಳು ವ್ಯಕ್ತವಾಗುತ್ತದೆಯಾದರೂ ಯಾವುದೇ ಸಿನೆಮಾಗಳು ಹೇಳಿಕೊಳ್ಳುವಷ್ಟು ಹಿಟ್‌ ಆಗಿಲ್ಲ. ಆದರೂ ಜಾನ್ವಿ ಬರೋಬ್ಬರಿ 65 ಕೋಟಿ ರೂಪಾಯಿಯ ಮನೆ ಖರೀದಿಸಲು ಮುಂದಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ʼವರ್ಷಕ್ಕೊಂದು ಸಿನೆಮಾ ಮಾಡುತ್ತೀರಿ, ನಿಮ್ಮ ಬಳಿ ಇಷ್ಟೊಂದು ಹಣ ಹೇಗೆ ಬಂತು?ʼ ಎಂದು ಕೆಲವರು ಹೇಳಿದರೆ ಪಾಪಾ ಕೀ ಪರಿ ಎಂಬರ್ಥದಲ್ಲಿ ʼಅಪ್ಪನ ದುಡ್ಡಿನಲ್ಲಿ ಮಜಾ ಮಾಡುತ್ತಿದ್ದಾರೆʼ ಎಂದೂ ಕೂಡ ಕೆಲವರು ಟೀಕಿಸಿದ್ದಾರೆ. ʼಬೋನಿ ಕಪೂರ್ ಮನೆ ಚೆನ್ನಾಗಿಯೇ ಇದೆ. ಮತ್ಯಾಕೆ ಈ ಮನೆ?ʼ ಎಂದೂ ಕೆಲವರು ಕಾಲೆಳೆದಿದ್ದಾರೆ. ಕೆಲವರಂತೂ ‘ಫ್ಲಾಪ್‌ ಸಿನಿಮಾ ಮಾಡಿ ಐಷಾರಾಮಿ ಮನೆ ಖರೀದಿಸಿರುವ ನಟಿ’ ಎಂದೂ ಕೂಡ ಕೆಲವರು ಟ್ಯಾಗ್ಲೈನ್ ನೀಡಿದ್ದಾರೆ. ‌

ಈ ಕುರಿತು ಜಾನ್ವಿ ಕಪೂರ್‌ ಪ್ರತಿಕ್ರಿಯೆ ನೀಡಿದ್ದು “ಹೌದು ನಾನು ಶ್ರೀದೇವಿ ಹಾಗೂ ಬೋನೀ ಕಪೂರ್‌ ಮಗಳು. ಆ ಬಗ್ಗೆ ನನಗೆ ಹೆಮ್ಮೆಇದೆ. ನನಗೆ ಮೊದಲ ಅವಕಾಶ ಸಿಕ್ಕಿರುವುದೂ ಇದೇ ಆಧಾರದಲ್ಲಿ. ಪ್ರತಿ ದಿನ ಜನರು ನನ್ನನ್ನು ಜಡ್ಜ್‌ ಮಾಡುತ್ತಾರೆ ಹಾಗೆಂದ ಮಾತ್ರಕ್ಕೆ ನಾನು ಪ್ರತೀಸಲ ಬದಲಾಗಲು ಸಾಧ್ಯವಿಲ್ಲ. ಒಳ್ಳೆ ಮನತನದಿಂದ ಬಂದಿರುವೆ ಎಂದು ನನ್ನ ಗುರುತನ್ನು ಕಳೆದುಕೊಳ್ಳುವುದಕ್ಕೆ ಇಷ್ಟವಿಲ್ಲ ನೆಗೆಟಿವ್ ಆಗಿ ಯೋಚನೆ ಮಾಡುವ ಬದಲು ಪಾಸಿಟಿವ್ ಆಗಿ ಸ್ವೀಕರಿಸುವೆ. ನೋಡುವವರು ನನ್ನನ್ನು ಏನ್ ಬೇಕಿದ್ದರೂ ಕರೆಯಬಹುದು ಆದರೆ ನನ್ನ ಜೊತೆ ಕೆಲಸ ಮಾಡುವವರು ನೆಗೆಟಿವ್ ಆಗಿ ಒಂದು ಮಾತು ಹೇಳಲಿ ಆಗ ನಾನು ನಿಜಕ್ಕೂ ಬದಲಾಗುವೆ’ ಎಂದು ಜಾನ್ವಿ ಉತ್ತರಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!