ಟ್ವಿಟ್ಟರ್ ನಿಂದ ಭಾರತೀಯ ಉದ್ಯೋಗಿಗಳ ವಜಾ: ಕೇಂದ್ರ ಐಟಿ ಸಚಿವ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ತನ್ನ ಉದ್ಯೋಗಿಗಳನ್ನು ಟ್ವಿಟ್ಟರ್ ಹಠಾತ್ ವಜಾಗೊಳಿಸಿರುವ ಬಗ್ಗೆ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ಯೋಗಿಗಳಿಗೆ ಪರಿವರ್ತನೆಗೆ ನ್ಯಾಯಯುತ ಸಮಯ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸುಮಾರು 150-180 ಉದ್ಯೋಗಿಗಳನ್ನು ಒಳಗೊಂಡಂತೆ ಜಾಗತಿಕವಾಗಿ ಟ್ವಿಟ್ಟರ್‌ನ ಅರ್ಧದಷ್ಟು ಉದ್ಯೋಗಿಗಳನ್ನು ಮಸ್ಕ್ ವಜಾಗೊಳಿಸಿದ್ದಾರೆ.

ಈ ಕುರಿತು ವೈಷ್ಣವ್ ಅವರ ಪ್ರತಿಕ್ರಿಯೆ ನೀಡಿದ್ದು, ಭಾರತದಲ್ಲಿ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾ ಮಾಡಿರುವ ವಿಧಾನವನ್ನು ನಾವು ಖಂಡಿಸುತ್ತೇವೆ. ಉದ್ಯೋಗಿಗಳಿಗೆ ಪರಿವರ್ತನೆಗಾಗಿ ನ್ಯಾಯಯುತ ಸಮಯವನ್ನು ನೀಡಬೇಕಿತ್ತು ಎಂದಿದ್ದಾರೆ.

ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ ಹಲವು ಮಹತ್ವದ ಬದಲಾವಣೆಗಳಾಗುತ್ತಿದ್ದು, ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!