ಶಿಕ್ಷಕರು ಮೌಲ್ಯಮಾಪನದಲ್ಲಿ ತಪ್ಪು ಮಾಡಿದ್ರೆ ಕೆಲಸಕ್ಕೆ ಬರುತ್ತೆ ಕುತ್ತು: ಸಚಿವ ನಾಗೇಶ್ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಕರು ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವಾಗ ತಪ್ಪು ಮಾಡುವಂತಿಲ್ಲ. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಭಾರಿ ಬೆಲೆ ತೆರುವ ಪರಿಸ್ಥಿತಿ ಬರಲಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ .

2022-2023 ಸಾಲಿನಿಂದ ಶಿಕ್ಷಣ ಇಲಾಖೆ ಮೌಲ್ಯಮಾಪನದಲ್ಲಿ ಭಾಗಿಯಾಗುವ ಉಪನ್ಯಾಸಕರು ಎಚ್ಚರ ವಹಿಸಬೇಕಾಗಿದೆ.ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿಸಿದ ಉಪನ್ಯಾಸಕರಿಗೆ ದಂಡದ ಜೊತೆಗೆ ಅಮಾನತು ಶಿಕ್ಷೆಯನ್ನೂ ನೀಡಲು ಇಲಾಖೆ ಮುಂದಾಗಿದೆ ಎಂದರು.

2021-22ರಲ್ಲಿ ಎಂಟು ಉಪನ್ಯಾಸಕರು ಮೌಲ್ಯಮಾಪನ ಮಾಡುವಾಗ ನಿರ್ಲಕ್ಷ್ಯ ತೋರಿಸಿದ್ದರು. ಇವರು ಇಂಗ್ಲಿಷ್​ ಮತ್ತು ಭೌತಶಾಸ್ತ್ರ ವಿಷಯಗಳ ಉಪನ್ಯಾಸಕರಾಗಿದ್ದರು. ಇವರಲ್ಲಿ ಒಬ್ಬರಂತೂ ಮರು ಮೌಲ್ಯಮಾಪನ ಮಾಡುವಾಗ ಒಂಬತ್ತು ಪುಟಗಳನ್ನು ತಿದ್ದಿರಲಿಲ್ಲ. ಇಂತಹ ಎಂಟು ಉಪನ್ಯಾಸಕರನ್ನು ಅಮಾನತು ಮಾಡುವ ನಿರ್ಧಾರಕ್ಕೆ ಇಲಾಖೆ ಬಂದಿದೆ.

ಕಳೆದ ಒಂದು ತಿಂಗಳ ಹಿಂದೆ SSLC ಹಾಗೂ PUC ಪರೀಕ್ಷೆಗಳ ಪೂರ್ವ ತಯಾರಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಮೌಲ್ಯಮಾಪನದಲ್ಲಿ ತಪ್ಪೆಸಗಿದ ಉಪನ್ಯಾಸಕರ ಮೇಲೆ ಕ್ರಮಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರಗಳು 2022-2023 ಸಾಲಿನ ಪರೀಕ್ಷೆ ಮೌಲ್ಯಮಾಪನಕ್ಕೂ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!