ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಫ್ಯಾನ್ ಕ್ರೇಜ್ ಹೆಚ್ಚಾಗಿದೆ. ಕೊಹ್ಲಿ ಎಲ್ಲಿ ಹೋಗ್ತಾರೆ, ಏನು ಮಾಡ್ತಿರ‍್ತಾರೆ ಎನ್ನುವ ಬಗ್ಗೆ ಫ್ಯಾನ್ಸ್ ಸದಾ ಕುತೂಹಲ ಇಟ್ಟುಕೊಂಡಿರುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಕೊಹ್ಲಿ ಖಾಸಗಿ ಕೋಣೆಯಲ್ಲಿ ಏನೆಲ್ಲಾ ಇದೆ ಎನ್ನುವ ವಿಡಿಯೋ ಇತ್ತೀಚೆಗಷ್ಟೇ ಲೀಕ್ ಆಗಿತ್ತು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಸೆಮಿಫೈನಲ್ ತಂಡಕ್ಕಾಗಿ ಕೊಹ್ಲಿ ಬಂದಿಳಿದಿದ್ದಾರೆ.
ಈ ವೇಳೆ ಅಭಿಮಾನಿಗಳು ಕೊಹ್ಲಿ ನೋಡಲು ಮುಗಿಬಿದ್ದಿದ್ದಾರೆ. ನಾಳೆ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಇದಕ್ಕಾಗಿ ತಂಡ ಈಗಾಗಲೇ ದಕ್ಷಿಣ ಆಫ್ರಿಕಾಗೆ ಬಂದಿಳಿದಿದೆ. ಭಾರತ ತಂಡ ಅಡಿಲೇಡ್ ಬಳಿಯ ದಕ್ಷಿಣ ಆಸ್ಟ್ರೇಲಿಯಾದ ಟೊರೆನ್ಸ್ ವಿಲ್ಲೆಯಲ್ಲಿರುವ ಬ್ರಿಟಿಷ್ ರಾಜ್ ರೆಸ್ಟೋರೆಂಟ್‌ಗೆ ಊಟಕ್ಕೆ ತೆರಳಿದೆ.
ಈ ವೇಳೆ ಊಟ ಮುಗಿಸಿ ಹೊರಬಂದ ಆಟಗಾರರಿಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ರೆಸ್ಟೋರೆಂಟ್ ಹೊರಭಾಗದಲ್ಲಿ ಅಭಿಮಾನಿಗಳು ದಂಡೇ ಇತ್ತು. ಕ್ರಿಕೆಟರ‍್ಸ್ ಜತೆ ಸೆಲ್ಫಿಗೆ ಜನ ಮುಗಿಬಿದ್ದಿದ್ದು, ಕೊಹ್ಲಿ ಕೊಹ್ಲಿ ಎಂದು ಕೂಗಿದ್ದಾರೆ. ಸೆಲ್ಫಿಗಾಗಿ ಅವರ ಹಿಂದೆ ಓಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಯಾನ್‌ಕ್ರೇಝ್‌ನಿಂದ ತಂಡ ಇನ್ನಷ್ಟು ಹುಮ್ಮಸ್ಸು ಪಡೆದಿದೆ.
https://www.instagram.com/reel/Cks2DMNhZ1a/?utm_source=ig_web_copy_link