ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂಬರುವ ಐಪಿಎಲ್ ಆವೃತ್ತಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫೀಲ್ಡಿಂಗ್ ಕೋಚ್ ಆಗಿ ರಯಾನ್ ಟೆನ್ ಡೋಶ್ಚಟೆ ಅವರು ನೇಮಕವಾಗಿದ್ದಾರೆ.
2012 ಮತ್ತು 2014 ರಲ್ಲಿ ನೈಟ್ ರೈಡರ್ಸ್ ಪ್ರಶಸ್ತಿ ವಿಜೇತ ತಂಡದ ಭಾಗವಾಗಿದ್ದ ಮಾಜಿ ನೆದರ್ಲ್ಯಾಂಡ್ಸ್ ನಾಯಕ ಡೊಶ್ಚಟೆ, ಪ್ರಾಂಚೈಸಿ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
ʼಅವರು ಅಭಿಷೇಕ್ ನಾಯರ್ (ಸಹಾಯಕ ಕೋಚ್), ಭರತ್ ಅರುಣ್ (ಬೌಲಿಂಗ್ ಕೋಚ್) ಮತ್ತು ಮುಖ್ಯ ಕೋಚ್ ಚಂದು ಪಂಡಿತ್ ಅವರಿಗೆ ಕಾರ್ಯನಿರ್ವಹಿಸಲಿದ್ದಆರೆ ಎಂದು ಹೇಳುವುದಕ್ಕೆ ನಾವು ಸಂತೋಷಪಡುತ್ತೇವೆ. ಓಂಕಾರ್ ಸಾಲ್ವಿ ಸಹಾಯಕ ಬೌಲಿಂಗ್ ಕೋಚ್ ಆಗಿದ್ದಾರೆ” ಎಂದು ನೈಟ್ ರೈಡರ್ಸ್ ಸಿಇಒ ವೆಂಕಿ ಮೈಸೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಡೊಶ್ಚಟೆ 2011 ಮತ್ತು 2015 ರ ನಡುವೆ ನೈಟ್ ರೈಡರ್ಸ್‌ಗಾಗಿ 29 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ, ಅವರು 382 T20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 7597 ರನ್ ಗಳಿಸಿದ್ದಾರೆ. ಜೊತೆಗೆ 114 ವಿಕೆಟ್‌ಗಳನ್ನು ಪಡೆದಿದ್ದು, 134 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. 2021 ರ ಟಿ 20 ವಿಶ್ವಕಪ್ ನಂತರ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಅವರು ಕೆಂಟ್‌ನ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ