ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿ 8 ಗಂಟೆಗೆ ಹೊತ್ತಿಗೆ ಭೂಕಂಪನ ಸಂಭವಿಸಿದೆ. ಸುಮಾರು 5 ಸೆಕೆಂಡ್ಗೂ ಹೆಚ್ಚು ಕಾಲ ಭೂಮಿ ಕಂಪಿಸಿದೆ.
ಭೂಮಿ ಕಂಪಿಸುತ್ತಿದ್ದಂತೆ ಮನೆ, ಕಚೇರಿ, ಕಟ್ಟದಲ್ಲಿದ್ದವರು ಹೊರಗೆ ಒಡಿ ಬಂದಿದ್ದಾರೆ. ಹಲವರು ಹೊರಗೆ ಬರಲಾಗದೆ ಒದ್ದಾಡಿದ್ದಾರೆ.
ದೆಹಲಿ ಮಾತ್ರವಲ್ಲದೆ ನೇಪಾಳದಲ್ಲಿ ಮತ್ತೆ ಭೂಕಂಪನವಾದ್ದು, 5.4 ತೀವ್ರತೆ ದಾಖಲಾಗಿದೆ.
ಸಂಜೆ 7.57ಕ್ಕೆ ನೇಪಾಳದಲ್ಲಿ 5.4ರ ತೀವ್ರತೆಯಲ್ಲಿ ಭೂಕಂಪನವಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರರಾಜಧಾನಿಯಲ್ಲಿ ಭೂಮಿ ಕಂಪಿಸಿದೆ.