ವಿಶ್ವಕಪ್‌ನ ಸೆಮಿಯಲ್ಲಿ ಸೋತ ಟೀಮ್ ಇಂಡಿಯಾಕ್ಕೆ ಧೈರ್ಯ ತುಂಬಿದ ಸಚಿನ್ ತೆಂಡೂಲ್ಕರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತ ಟೀಂ ಇಂಡಿಯಾ ತಂಡಕ್ಕೆ ಸಚಿನ್ ತೆಂಡೂಲ್ಕರ್ ಧೈರ್ಯ ತುಂಬಿದ್ದಾರೆ.

ಸೋಲು ತುಂಬಾ ನಿರಾಶಾದಾಯಕ. ಈ ಸೋಲಿನ ಆಧಾರದ ಮೇಲೆ ತಂಡದ ಸಾಮರ್ಥ್ಯವನ್ನು ನಿರ್ಧರಿಸಬಾರದು. ಯಾವುದೇ ಆಟವಾದರೂ ಸೋಲು – ಗೆಲವು ಸಹಜ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಅಲ್ಲದೇ ಸೋಲಿನ ಹತಾಶೆಯಲ್ಲಿರುವ ತಂಡಕ್ಕೆ ಧೈರ್ಯದ ಮಾತುಗಳನ್ನು ಸಹ ಆಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಸೋಲು ತುಂಬಾ ನಿರಾಶಾದಾಯಕವಾಗಿದೆ. ಅಡಿಲೇಡ್ ಓವಲ್‌ ಮೈದಾನದಲ್ಲಿ 168 ರನ್‌ಗಳ ಗುರಿ ಸಾಕಾಗಲಿಲ್ಲ, ಏಕೆಂದರೆ ಮೈದಾನದ ಆಕಾರ ಹೀಗಿದೆ. ಗಾತ್ರದ ಬೌಂಡರಿ ಚಿಕ್ಕದಾಗಿದೆ. 190 ಮತ್ತು ಅದರ ಹತ್ತಿರ ಸ್ಕೋರ್ ನೀಡಿದ್ದರೆ ಚೆನ್ನಾಗಿರುತ್ತಿತ್ತು. ದೊಡ್ಡ ಮೊತ್ತವನ್ನು ಕಲೆ ಹಾಕದಿರುವುದು ಮತ್ತು ನಮಗೆ ವಿಕೆಟ್ ಪಡೆಯಲು ಸಾಧ್ಯವಾಗದಿರುವುದು ದುರಂತ. ಎರಡಲ್ಲೂ ನಾವು ವಿಫಲರಾಗಿದ್ದೇವೆ. ಭಾರತಕ್ಕೆ 10 ವಿಕೆಟ್‌ಗಳ ಸೋಲು ನೀಡಿದೆ ಅಂದರೆ, ಇಂಗ್ಲೆಂಡ್ ಶಕ್ತಿಯುತ ತಂಡವಾಗಿದೆ ಎಂದರ್ಥ ಎಂದು ಹೇಳಿದ್ದಾರೆ.

ಕೇವಲ ಒಂದು ಪಂದ್ಯದ ಆಧಾರದ ಮೇಲೆ ಭಾರತ ತಂಡದ ಪ್ರದರ್ಶನವನ್ನು ನಿರ್ಣಯಿಸಲು ಸಾಧ್ಯವಿಲ್ಲ. ಟಿ-20 ಕ್ರಿಕೆಟ್‌ನಲ್ಲಿ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಇದು ರಾತ್ರೋರಾತ್ರಿ ಪಡೆದ ಸ್ಥಾನವಲ್ಲ. ಇಲ್ಲಿಗೆ ತಲುಪಲು ದೀರ್ಘಕಾಲದವರೆಗೆ ಉತ್ತಮ ಕ್ರಿಕೆಟ್ ಆಡಬೇಕು. ಆಟಗಾರರು ಸಹ ವಿಕೆಟ್ ನೀಡುವ ಮೂಲಕ ವಿಫಲರಾಗಲು ಬಯಸಲಿಲ್ಲ.ಕ್ರೀಡೆಯಲ್ಲಿ ಈ ರೀತಿಯ ಏರಿಳಿತಗಳು ಸಹಜ. ನಾವು ಇದರಲ್ಲಿ ಒಟ್ಟಾಗಿರಬೇಕು ಎಂದು ಟೀಂ ಇಂಡಿಯಾಗೆ ಧೈರ್ಯ ತುಂಬಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!