ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ-20 ಶೃಂಗಸಭೆಗಾಗಿ ಎರಡು ದಿನಗಳ ಕಾಲ ಇಂಡೋನೇಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿಮೋದಿ ಅವರು ಸೋಮವಾರ ರಾತ್ರಿ ಇಂಡೋನೇಷ್ಯಾದ ಬಾಲಿ ತಲುಪಿದ್ದು, ಅದ್ದೂರಿ ಸಾಂಪ್ರದಾಯಿಕ ಸ್ವಾಗತ ಮಾಡಲಾಯಿತು.
ಎರಡು ದಿನ ನಡೆಯುವ ಶೃಂಗಸಭೆಯು ಮಂಗಳವಾರ (ನವೆಂಬರ್ 15) ಬೆಳಗ್ಗೆ ಆರಂಭವಾಗಲಿದ್ದು, ಹೀಗಾಗಿ ಪ್ರಧಾನಿ ಮೋದಿ ಬಾಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
Halo Indonesia. Telah tiba di Bali untuk ambil bagian dalam helatan KTT G20. Saya berharap dapat berdiskusi dengan para pemimpin dunia mengenai berbagai isu global. @g20org pic.twitter.com/bmRHZj8dxt
— Narendra Modi (@narendramodi) November 14, 2022
ಈ ಸಭೆಗಳಲ್ಲಿ ಜಾಗತಿಕ ನಾಯಕರ ಜತೆ ಚರ್ಚಿಸಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವು ಜಾಗತಿಕ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.