ದಿನಭವಿಷ್ಯ | ಹಿರಿಯರು, ಸಹೋದ್ಯೋಗಿ ಜತೆಗೆ ವಾಗ್ವಾದ ಸಂಭವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಹಿರಿಯರು ಅಥವಾ ಸಹೋದ್ಯೋಗಿ ಜತೆಗೆ ವಾಗ್ವಾದ ಸಂಭವ. ಅದರಿಂದ ಮನಸ್ಸಿಗೆ ಅಶಾಂತಿ. ನಿಮ್ಮದೇ ಸರಿಯಿದ್ದರೂ ವಿವೇಕದಿಂದ ವರ್ತಿಸಿ.

ವೃಷಭ
ಪ್ರೀತಿಪಾತ್ರರ ಜತೆ ವರ್ತಿಸುವಾಗ ಎಚ್ಚರದಿಂದಿರಿ. ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ನೋಡಿಕೊಳ್ಳಿ. ಅನವಶ್ಯ ವಿವಾದ ತಪ್ಪಿಸಿಕೊಳ್ಳಿ.

ಮಿಥುನ
ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯವನ್ನು ಸಮರ್ಥ ವಾಗಿ ಪೂರೈಸುವಿರಿ. ಆದರೂ ನಿಮ್ಮಲ್ಲಿ ಯಾವುದೋ ಅತೃಪ್ತಿ ಉಳಿದುಕೊಳ್ಳುವುದು.

ಕಟಕ
ನಿಮ್ಮ ವ್ಯವಹಾರ ಜ್ಞಾನ ಎಲ್ಲರಿಂದ ಮೆಚ್ಚಲ್ಪಡುವುದು. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಇಂದು ನಿರಾಳ, ಸಂತೃಪ್ತಿಯ ದಿನ.

ಸಿಂಹ
ಸಮಸ್ಯೆಗಳು ಮತ್ತು ಅಸುರಕ್ಷತೆಯ ಭಾವನೆ. ಇದರಿಂದ ನಿಮ್ಮ ವಿವೇಕ ಮಸುಕಾಗುವುದು. ಸ್ಪಷ ನಿರ್ಧಾರ ತಾಳಲು ವಿಫಲರಾಗುವಿರಿ. ಇದೆಲ್ಲ ತಾತ್ಕಾಲಿಕ ಸ್ಥಿತಿ.

ಕನ್ಯಾ
ನಿಮ್ಮ ಸಮಸ್ಯೆಗಳಿಗೆ ಇತರರನ್ನು ದೂರುತ್ತಾ ಕೂರದಿರಿ. ನಿಮ್ಮಲ್ಲೇ ಪರಾಮರ್ಶೆ ಮಾಡಿಕೊಳ್ಳಿ. ಕಾರಣ ಹಾಗೂ ಪರಿಹಾರ ಎರಡೂ ಕಾಣಲಿದೆ.

ತುಲಾ
ಇಂದು ಎಲ್ಲಾ ಕಾರ್ಯ ಗಳು ಸುಗಮವಾಗಿ ಸಾಗುವವು. ಅಡ್ಡಿಗಳು ತಾವಾಗಿ ನಿವಾರಣೆ ಆಗುವವು. ಬಂಧುಗಳಿಂದ ಉತ್ತಮ ಸಹಕಾರ ಲಭ್ಯ.

ವೃಶ್ಚಿಕ
ಅಗತ್ಯವಿಲ್ಲದಿದ್ದರೂ ಅತಿಯಾದ ಖರ್ಚು ಒದಗಲಿದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಆಪ್ತ ಬಂಧುಗಳ ಜತೆ ಮನಸ್ತಾಪ ಸಂಭವ. ಸಹನೆ ಕಳಕೊಳ್ಳದಿರಿ.

ಧನು
ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದರಿಂದ ನೆಮ್ಮದಿ ಹಾಳು. ಕೆಲವರು ನಿಮಗೆ ಅಡ್ಡಗಾಲು ಹಾಕಲೂ ಯತ್ನಿಸುವರು. ಮಾನಸಿಕ ಉದ್ವಿಗ್ನತೆ.

ಮಕರ
ಹಣದ ವಿಷಯದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಕುಟುಂಬದಲ್ಲಿ ಉಂಟಾಗಿದ್ದ ಭಾವನಾತ್ಮಕ ಸಮಸ್ಯೆ ನಿವಾರಣೆಯಾಗುವುದು.

ಕುಂಭ
ಪ್ರಯಾಣದ ಉದ್ದೇಶಕ್ಕೆ ಅಡ್ಡಿಗಳು ಒದಗ ಬಹುದು. ಕೆಲವರಿಂದ ನಿಮ್ಮ ಮನಶ್ಯಾಂತಿ ಹಾಳಾದೀತು. ಅವರಿಂದ ಆದಷ್ಟು ದೂರ ಇರುವುದು ಒಳ್ಳೆಯದು.

ಮೀನ
ಕೆಲವು ವಿಷಯಗಳು ನೆಮ್ಮದಿ ಕದಡುತ್ತವೆ. ಆಪ್ತರ ಕಾಳಜಿಯು ನಿಮ್ಮ ಮನಶ್ಯಾಂತಿ ನೆಲೆಸಲು ಕಾರಣವಾಗುವುದು. ಆರ್ಥಿಕ ಉನ್ನತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!