ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿ ಹೊಸದಾಗಿ ನಿರ್ಮಿಸಲಾದ 8 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸಿಎಂ ಕೆಸಿಆರ್ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆಸಿಆರ್ ತೆಲಂಗಾಣ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯವಾಗಿದ್ದು, 1,180 ಪಿಜಿ ಸೀಟುಗಳು ಲಭ್ಯವಾಗಿವೆ ಎಂದರು.
ಜಗಿತ್ಯಾಲ, ರಾಮಗುಂಡಂ, ಕೊತಗುಡೆಂ, ಸಂಗಾರೆಡ್ಡಿ, ನಾಗರ್ ಕರ್ನೂಲ್, ಮಂಚಿರ್ಯಾಲ, ವನಪರ್ತಿ, ಮಹಬೂಬಾಬಾದ್ನಲ್ಲಿ ಕೆಸಿಆರ್ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಿದೆ. ಇಂದು ಅವುಗಳ ಉದ್ಘಾಟನಾ ಸಮಾರಂಭ ನಡೆಸಿ ಮಾತನಾಡಿದ ಅವರು, ದೂರದ ಪ್ರದೇಶದಲ್ಲೂ ವೈದ್ಯಕೀಯ ಕಾಲೇಜುಗಳು ಸಿಗುತ್ತವೆ ಎಂದು ಯಾರೂ ಊಹಿಸದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ತೆಲಂಗಾಣ ರಾಜ್ಯದ ಇತಿಹಾಸದಲ್ಲಿ ಇದೊಂದು ಹೊಸ ಅಧ್ಯಾಯ. ಈ ವೈದ್ಯಕೀಯ ಕಾಲೇಜುಗಳು ನಿರ್ಮಾಣ ಮಾಡಲು ಸಚಿವ ಹರೀಶ್ ರಾವ್ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. ಹೊಸದಾಗಿ ನಿರ್ಮಾಣವಾಗಿರುವ ಈ ಎಂಟು ಕಾಲೇಜುಗಳೊಂದಿಗೆ ರಾಜ್ಯದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 2,790ಕ್ಕೆ ಏರಿಕೆಯಾಗಿದೆ. ಪಿಜಿ ಸೀಟುಗಳೂ 1,180ಕ್ಕೆ ಏರಿಕೆಯಾಗಿದೆ ಎಂದ ಅವರು ಇಷ್ಟೊಂದು ಅಭಿವೃದ್ಧಿಯಿಂದ ಮುನ್ನಡೆಯುತ್ತಿರುವ ತೆಲಂಗಾಣ ದೇಶಕ್ಕೆ ಆದರ್ಶವಾಗುತ್ತಿದೆ ಎಂದರು.
ಕಳೆದ 8 ವರ್ಷಗಳಲ್ಲಿ 12 ಕಾಲೇಜುಗಳು ಲಭ್ಯವಿವೆ. ಇವುಗಳನ್ನು ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿದೆ. ಇದರ ಭಾಗವಾಗಿ ಮುಂದಿನ ವರ್ಷ 9 ಮತ್ತು ಅದರ ಮುಂಬರುವ ವರ್ಷ 8 ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ. ಹೀಗಾಗಿ, ತೆಲಂಗಾಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.