ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಷ್ಟಪಟ್ಟು ಹುಡುಗನನ್ನು ಹುಡುಕಿ, ಜಾತಕ ನೋಡಿ, ಶಾಸ್ತ್ರಗಳನ್ನು ಮಾಡಿ, ಛತ್ರಕ್ಕೆ ಅಡ್ವಾನ್ಸ್ ನೀಡಿ, ಮನೆಮನೆಗೂ ಪತ್ರಿಕೆ ಹಂಚಿ, ಸಾವಿರಾರು ಕೆಲಸಗಳ ನಂತರ ಒಂದು ಮದುವೆ ಆಗಲು ಸಾಧ್ಯ. ಆದರೆ ಮದುವೆ ಮುರಿಯೋಕೆ ಒಂದು ಸಿಲ್ಲಿ ಕಾರಣ ಸಾಕು ಅನ್ನೋದಕ್ಕೆ ನಿದರ್ಶನದಂತೆ ಲಕ್ನೋದಲ್ಲಿ ಘಟನೆಯೊಂದು ನಡೆದಿದೆ.
ಉತ್ತರಾಖಂಡದ ಹಲ್ದಾನಿಯಲ್ಲಿರುವ ವಧುವಿಗೆ ವರನ ತಂದೆ-ತಾಯಿ ಹತ್ತು ಸಾವಿರ ರೂಪಾಯಿಯ ಲೆಹೆಂಗಾ ಕಳುಹಿಸಿದ್ದಾರೆ. ಲೆಹೆಂಗಾ ನೋಡಲು ಚೆನ್ನಾಗಿಲ್ಲ ಅಲ್ಲದೇ ಚೀಪ್ ಕ್ವಾಲಿಟಿ ಎಂದು ವಧು ಲೆಹೆಂಗಾ ತಿರಸ್ಕರಿಸಿದ್ದು, ಮದುವೆಯೇ ಬೇಡ ಎಂದಿದ್ದಾಳೆ.
ಮದುವೆ ಆಮಂತ್ರಣ ಪತ್ರಿಕೆ ಹಂಚಿ ಆಗಿದ್ದರೂ, ವರನ ಕಡೆಯವರು ನನಗೆ ಹೀಗೆ ಮಾಡಲು ಹೇಗೆ ಸಾಧ್ಯ ಎಂದು ವಧು ಕೋಪಗೊಂಡಿದ್ದು, ಮದುವೆಯೇ ಬೇಡ ಎಂದಿದ್ದಾಳೆ. ಈ ವಿಷಯ ಪೊಲೀಸರ ವರೆಗೂ ಹೋಗಿದ್ದು, ಸಂಧಾನ ಕೂಡ ಕೆಲಸ ಮಾಡಿಲ್ಲ. ಇದೀಗ ಪೊಲೀಸರು ಈ ಮದುವೆಯೇ ನಿಂತು ಹೋಗಿದೆ ಎಂದು ಹೇಳಿದ್ದಾರೆ.