ಯುವಕನ ಪ್ರತಿಭೆಗೆ ಮನಸೋತ ಆನಂದ್ ಮಹೀಂದ್ರಾ:ಟ್ವಿಟ್ಟರ್‌ನಲ್ಲಿ ವಿಡಿಯೋ ಪೋಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್‌ನಲ್ಲಿ ಆಸಕ್ತಿದಾಯಕ ಪೋಸ್ಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ಆನಂದ್ ಮಹೀಂದ್ರಾ ಯಾವಾಗಲೂ ಹೊಸತನವನ್ನು ಪ್ರೋತ್ಸಾಹಿಸುತ್ತಾ ಕೆಲವೊಮ್ಮೆ ಅಗತ್ಯವಿರುವ ಬೆಂಬಲವನ್ನು ನೀಡುತ್ತಾರೆ. ಇದೀಗ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಸಕ್ತಿದಾಯಕ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಆಟೋಮೋಟಿವ್ ಆರ್ಟಿಸ್ಟ್ ಕ್ರಿಸ್ ಡನ್‌ಲಾಪ್ ಎಂಬ ಯುವಕನ ಪೇಂಟಿಂಗ್‌ ಮಾರುಹೋಗಿದ್ದಾರೆ.

ಈ ವಿಡಿಯೋದಿಂದ ಪ್ರಭಾವಿತರಾದ ಆನಂದ್ ಮಹೀಂದ್ರಾ ಎಸ್‌ಯುವಿಗಳಲ್ಲಿ ಒಂದನ್ನು ಚಿತ್ರಿಸಲು ಕ್ರಿಸ್‌ಗೆ ಮನವಿ ಮಾಡಬೇಕು ಎಂದು ಬರೆದುಕೊಂಡಿದ್ದಾರೆ. ಮಹೀಂದ್ರಾ ಅವರ ಟ್ವೀಟ್‌ಗೆ ಒಂದು ಗಂಟೆಯೊಳಗೆ ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಎಸ್‌ಯುವಿ ಎಕ್ಸ್‌ಯುವಿ 700, ಅತ್ಯಂತ ಜನಪ್ರಿಯ ಮಹೀಂದ್ರ ಥಾರ್ ಅನ್ನು ಬಿಡಿಸಲು ಮನಿವ ಮಾಡಿ ಎಂದು ನೆಟ್ಟಿಗರು ಮಹೀಂದ್ರಾಗೆ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!