ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಕಿ ನಿಕ್ಕಿ ಗಲ್ರಾನಿ ಹಾಗೂ ತೆಲುಗು ಜನಪ್ರಿಯ ನಟ ಆದಿ ಪಿನಿಶೆಟ್ಟಿ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೇ ಹಸೆಮಣೆ ಏರಿದ್ದರು. ಸದ್ಯ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇನ್ನೊಂದೆಡೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ತೆಲುಗು ಮತ್ತು ತಮಿಳು ಮಾಧ್ಯಮಗಳಲ್ಲಿ ನಿಕ್ಕಿ ಗಲ್ರಾನಿ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು.
ಈ ಸುದ್ದಿಯನ್ನು ನಿಜವೆಂದು ನಂಬಿದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಕುರಿತು ಬರುತ್ತಿರುವ ಅನೇಕ ಕಮೆಂಟ್ಗಳಿಗೆ ನಿಕ್ಕಿ ತಮ್ಮ ಇನ್ಸ್ಟಾಗ್ರಾಮ್ ಪ್ರತಿಕ್ರಿಯಿಸುತ್ತಾ…ನನಗೇ ಈ ಬಗ್ಗೆ ಗೊತ್ತಿಲ್ಲ. ನಾನು ಗರ್ಭಿಣಿ ಎಂಬ ಸುದ್ದಿಯನ್ನು ಕೆಲವರು ವೈರಲ್ ಮಾಡಿದ್ದಾರೆ. ಅವರೇ ನನ್ನ ಡೆಲಿವರಿ ದಿನಾಂಕವನ್ನೂ ಹೇಳುತ್ತಾರೆ. ಸದ್ಯ ನಾನು ಗರ್ಭಿಣಿ ಅಲ್ಲ, ನಾನು ಗರ್ಭಿಣಿಯಾಗಿದ್ದರೆ ನಾನು ನಿಮಗೆ ಮೊದಲು ಸುದ್ದಿಯನ್ನು ಹೇಳುತ್ತೇನೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.