ಟ್ವೀಟರ್‌ನಿಂದ ಹೊರ ಹಾಕಿದರೂ ಚಿಂತೆಯಿಲ್ಲ: ಕೈ ಬೀಸಿ ಕರೆಯುತ್ತಿವೆ ಇತರ ಕಂಪನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚೆಗೆ ನೂತನವಾಗಿ ಟ್ವೀಟರ್‌ ಖರೀದಿಸಿದ ಎಲಾನ್‌ ಮಸ್ಕ್‌ ಸಾವಿರಾರು ಉದ್ಯೋಗಿಗಳನ್ನು, ಗುತ್ತಿಗೆಕಾರ್ಮಿಕರನ್ನು ಹೊರಹಾಕಿರುವುದನ್ನು ನೀವು ಕೇಳಿರುತ್ತೀರಿ. ಟ್ವೀಟರ್‌ ಒಂದೇ ಅಲ್ಲದೇ ಮೆಟಾ, ಅಮೇಜಾನ್‌ ಗಳು ಸೇರಿದಂತೆ ಇತರ ದೊಡ್ಡ ದೊಡ್ಡ ಕಂಪನಿಗಳೂ ಉದ್ಯೋಗಕ್ಕೆ ಕತ್ತರಿ ಪ್ರಯೋಗ ಮಾಡುತ್ತಿವೆ. ಇದರಿಂದ ಹೊರ ತಳ್ಳಲ್ಪಟ್ಟ ಉದ್ಯೋಗಳು ಉದ್ಯೋಗ ಕಳೆದುಕೊಂಡು ಕಂಗಾಲಾಗಿರುತ್ತಾರೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು.

ಏಕೆಂದರೆ ಟ್ವೀಟರ್‌ ನಿಂದ ಹೊರ ಬಂದ ವಾರಗಳೊಳಗೆ ಉಳಿದ ಕಂಪನಿಗಳಿಂದ ಮಾಜಿ ಟ್ವೀಟರ್‌ ಉದ್ಯೋಗಿಗಳಿಗೆ ಅವಕಾಶಗಳು ಹರಿದು ಬರುತ್ತಿವೆ. ಅದೆಷ್ಟೋ ಕಂಪನಿಗಳು ಅವರನ್ನು ಕೈ ಬೀಸಿ ಕರೆಯುತ್ತಿವೆ. ಇನ್ನೂ ಕೆಲವು ಕಂಪನಿಗಳು ಅವರನ್ನಿಟ್ಟಿಕೊಂಡು ಹೊಸ ಟೆಕ್‌ ಸಾಮ್ರಾಜ್ಯವನ್ನು ವಿಸ್ತರಿಸುವತ್ತಲೂ ಯೋಚಿಸುತ್ತಿವೆ.

ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ ಶುಕ್ರವಾರ, ಸ್ವಾಯತ್ತ ಚಾಲನೆ, ಕೃತಕ ಬುದ್ಧಿಮತ್ತೆ, ವಿದ್ಯುದ್ದೀಕರಣ ಮತ್ತು ಯಂತ್ರ ಕಲಿಕೆಯವರೆಗಿನ ಕ್ಷೇತ್ರಗಳಲ್ಲಿ ತನ್ನ ಬೆಳವಣಿಗೆಗೆ ಶಕ್ತಿ ತುಂಬಲು 800 ಮಂದಿ ಟ್ವೀಟರ್‌ ನಿಂದ ವಜಾಗೊಂಡ ತಂತ್ರಜ್ಞನರನ್ನು ಸೇರಿಸಿಕೊಳ್ಳುತ್ತಿದೆ. ಅಲ್ಲದೇ ʼಕೂʼ ಅಪ್ಲಿಕೇಷನ್‌ ಕೂಡ ಕೆಲ ಟ್ವೀಟರ್‌ ಉದ್ಯೋಗಿಳನ್ನು ನೇಮಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಟ್ವೀಟರ್‌ ನಲ್ಲಿ ಉಳಿದಿರುವವರೂ ಕೂಡ ಟ್ವೀಟರ್‌ ನಿಂದ ಹೊರ ಬಂದು ಇತರ ಕಂಪನಿಗಳಲ್ಲಿ ಅವಕಾಶ ಗಿಟ್ಟಿಕೊಳ್ಳತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!