ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಪ್ರಾಣಹಾನಿ ಜೊತೆಗೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಕೂಡ ನಷ್ಟವಾಗಿದೆ. ಭೂಕಂಪದ ತೀವ್ರತೆಗೆ ಅಪಾರ ಸಂಖ್ಯೆಯ ಮನೆಗಳು ಮತ್ತು ಕಟ್ಟಡಗಳು ನೆಲಸಮವಾಗಿವೆ. ಸಾವಿರಾರು ಜನ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿ ಬೀದಿಗೆ ಬಂದಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ-ಪಾಸ್ತಿ ಹಾನಿಯಾಗಿರುವ ಸಂಭವವಿದೆ.
ಜಾವಾ ಮತ್ತು ಸಿಯಾನ್ ಝಾರ್ ನಲ್ಲಿ ಎಲ್ಲಿ ನೋಡಿದರೂ ಕುಸಿದ ಕಟ್ಟಡ, ಹಾಳಾದ ರಸ್ತೆ ಅವಶೇಷಗಳೇ ಕಾಣಸಿಗುತ್ತವೆ. ಉರುಳಿದ ಬಿದ್ದ ಕಟ್ಟಡಗಳ ಅವಶೇಷಗಳ ಕೆಳಗೆ ಇನ್ನೂ ಅದೆಷ್ಟೋ ಜನರ ಪ್ರಾಣವಿದೆ. ಮನೆ, ಕಟ್ಟಡ, ರಸ್ತೆ, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನೂ ಅನೇಕ ಸಾರ್ವಜನಿಕ ಆಸ್ತಿ-ಪಾಸ್ತಿ ಒಟ್ಟು ಕೋಟ್ಯಾಂತರ ರೂಪಾಯಿ ಹಾನಿಯಾಗಿರುವ ಸಾಧ್ಯತೆಯಿದೆ.