ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ತನ್ನ ಸಂಸತ್ತಿನಲ್ಲಿ ಅಂಗೀಕಾರಗೊಂಡಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮಂಗಳವಾರ ಘೋಷಿಸಿದ್ದಾರೆ. “ಭಾರತದೊಂದಿಗಿನ ನಮ್ಮ ಮುಕ್ತ ವ್ಯಾಪಾರ ಒಪ್ಪಂದವು ಸಂಸತ್ತಿನ ಮೂಲಕ ಅಂಗೀಕರಿಸಲ್ಪಟ್ಟಿದೆ” ಎಂದು ಅಲ್ಬನೀಸ್ ಟ್ವೀಟ್ ಮಾಡಿದ್ದಾರೆ.
ಮುಂದಿನ ವರ್ಷ ಮಾರ್ಚ್‌ನಲ್ಲಿ ಭಾರತಕ್ಕೆ ಭೇಟಿ ಜೊತೆಗೆ ಜಿ 20 ಶೃಂಗಸಭೆಯ 17 ನೇ ಆವೃತ್ತಿ ನಡೆದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿ-20ಶೃಂಗಸಭೆಯಲ್ಲಿ ನಾನು ಭಾರತದ ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಿದ್ದು, ಅಲ್ಲಿ ನಾವು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ನಿಕಟ ಆರ್ಥಿಕ ಸಹಕಾರ ಒಪ್ಪಂದದ ಬಗ್ಗೆ ಚರ್ಚಿಸಿದ್ದೆವು. ಇದು ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಆರ್ಥಿಕ ಸಂಬಂಧವನ್ನು ವಿಸ್ತರಿಸಲು ಬಹಳ ಮುಖ್ಯವೆಂದು ಪರಿಗಣಿಸಿದ್ದೇವೆ.
ಭಾರತಕ್ಕೆ ಭೇಟಿ ನೀಡುವಾಗ ನಮ್ಮ ಜೊತೆಗೆ ವ್ಯಾಪಾರ ನಿಯೋಗವನ್ನು ಕರೆದೊಯ್ಯುತ್ತೇವೆ. ಅದು ನಮ್ಮ ಎರಡು ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಒಂದು ಪ್ರಮುಖ ಭೇಟಿಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.