ಹೊಸದಿಗಂತ ಡಿಜಿಟಲ್ ಡೆಸ್ಕ್
ಪಾಕ್ ಆಕ್ರಮಿತ್ ಕಾಶ್ಮೀರ ಮರಳಿ ಪಡೆಯಲು ಭಾರತೀಯ ಸೇನೆಯು ಸಿದ್ಧವಾಗಿದೆ. ಈ ಬಗ್ಗೆ ಭಾರತ ಸರ್ಕಾರ ಹೊರಡಿಸುವ ಯಾವುದೇ ಆದೇಶವನ್ನು ಭಾರತೀಯ ಸೇನೆಯು ನಿರ್ವಹಿಸುತ್ತದೆ ಎಂದು ಉತ್ತರ ಕಮಾಂಡ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಪೂಂಚ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ,
ರಜೌರಿ-ಪೂಂಚ್ ಪ್ರದೇಶ ಸೇರಿದಂತೆ ಜೆ & ಕೆ ನಲ್ಲಿ 300 ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಸೇನೆಗೆ ಲಭ್ಯವಿರುವ ಅಂಕಿಅಂಶಗಳು ಸೂಚಿಸುತ್ತವೆ. ಜಮ್ಮು ಕಾಶ್ಮೀರದಲ್ಲಿ 82 ವಿದೇಶಿ ಭಯೋತ್ಪಾದಕರು ಮತ್ತು 53 ಸ್ಥಳೀಯ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಸುಮಾರು 170 ಅಪರಿಚಿತ ಭಯೋತ್ಪಾದಕರು (ಹೈಬ್ರಿಡ್) ಸೈನ್ಯದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಯೋತ್ಪಾದಕ ಸಂಚುಗಳನ್ನು ತಡೆಯಲು ಮತ್ತು ವಿಫಲಗೊಳಿಸಲು ಭದ್ರತಾ ಪಡೆಗಳು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಕಮಾಂಡರ್ ಭರವಸೆ ನೀಡಿದರು.
ಪಾಕ್ ಭಾರತದಿಂದ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲ ಭಾಗಗಳನ್ನು ಹಿಂಪಡೆಯುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇತ್ತೀಚೆಗೆ ಸೂಕ್ಷವಾಗಿ ಪ್ರಸ್ತಾಪಿಸಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಮೇಲೆ ಪಾಕ್ ಎಸಗುತ್ತಿರುವ ದೌರ್ಜನ್ಯವನ್ನು ನೋಡಿಯೂ ನಾವು ಸಮ್ಮನಿರುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದ್ದರು. ಈ ಬೆನ್ನಲ್ಲೇ ಉಪೇಂದ್ರ ದ್ವಿವೇದಿ ನೀಡಿರುವ ಹೇಳಿಕೆ ಮಹತ್ವ ಪಡೆದಿದೆ.
ಪಾಕ್ ಆಕ್ರಮಿತ ಪ್ರದೇಶ ವಶಕ್ಕೆ ಪಡೆಯುವ ಪ್ರಶ್ನೆ ಬಗ್ಗೆ ಉತ್ತರಿಸಿದ ದ್ವಿವೇದಿ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತಾಗಿ ಭಾರತ ಸರ್ಕಾರ ಹೊರಡಿಸಿದ ಯಾವುದೇ ಆದೇಶವನ್ನು ಕೈಗೊಳ್ಳಲಾಗುತ್ತದೆ. ಭಾರತೀಯ ಸೇನೆ ಈ ಬಗ್ಗೆ ಸನ್ನದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರಿಗೆ ಪಾಕ್ ಡ್ರೋನ್‌ಗಳ ಮೂಲಕ ಪಿಸ್ತೂಲ್‌ಗಳು, ಗ್ರೆನೇಡ್‌ಗಳು ಮತ್ತು ಡ್ರಗ್ ರವಾನಿಸುತ್ತಿದೆ. ಆ ಸರಕುಗಳನ್ನು ಬೀಳಿಸುವ ಸ್ಥಳಗಳನ್ನು ನಾವು ಗುರುತಿಸಿದ್ದೇವೆ. ಜೊತೆಗೆ ನಾವು ಡ್ರೋನ್ ಕಾರ್ಯವಿಧಾನಗಳನ್ನು ಎದುರಿಸಲು ಪ್ರಾರಂಭಿಸಿದ್ದೇವೆ. ಭಯೋತ್ಪಾದಕರು ನಾಗರಿಕರನ್ನು ಗುರಿಯಾಗಿಸಲು ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಲಾಗುತ್ತಿದ್ದು, ಅಮಾಯಕರ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ