ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ನೀವು ಏನನ್ನು ನಿರೀಕ್ಷಿಸಿದ್ದಿರೋ ಅದಕ್ಕಿಂತ ಹೆಚ್ಚಿನದ್ದನ್ನೇ ಇಂದು ಪಡೆಯುವಿರಿ. ಕೌಟುಂಬಿಕ ಸಹಕಾರ. ವೃತ್ತಿಯಲ್ಲಿ ಎಲ್ಲವೂ ಸುಗಮ, ಸರಳ.
ವೃಷಭ
ಎಲ್ಲರ ಅಭಿಪ್ರಾಯ ಕೇಳುತ್ತ ಕೂತರೆ ನೀವು ಒತ್ತಡದಿಂದ ನಲುಗುವಿರಿ. ಕೆಲ ವೊಮ್ಮೆ ನಿಮ್ಮದೇ ಸ್ವಂತ ನಿರ್ಧಾರ ತಾಳುವುದು ಒಳ್ಳೆಯದು.
ಮಿಥುನ
ಹೊರಗಿನ ಬದುಕು ನೀವು ಬಯಸಿದಂತೆ ಸಾಗುವುದು. ಕಾರ್ಯಸಿದ್ಧಿ. ಆದರೆ ಕೌಟುಂಬಿಕ ಬದುಕಿನಲ್ಲಿ ಸಮಸ್ಯೆ ಎದುರಿಸುವಿರಿ. ಅಭಿಪ್ರಾಯಭೇದ.
ಕಟಕ
ಕೌಟುಂಬಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ. ಜಂಕ್ಫುಡ್ ತಿರಸ್ಕರಿಸಿ. ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಿ. ಖರ್ಚು ಹೆಚ್ಚಳ.
ಸಿಂಹ
ದುಬಾರಿ ವಸ್ತು ಖರೀದಿ ಆಸೆ ತ್ಯಜಿಸಿ. ನಿಮ್ಮ ಮನದಲ್ಲಿ ಸದಾ ನೆಗೆಟಿವ್ ಅಂಶ ತುಂಬಿಸುವ ವ್ಯಕ್ತಿಗಳಿಂದ ದೂರ ವಿರಿ. ನಿರಾಶೆ ಬೇಡ.
ಕನ್ಯಾ
ಕೆಲಸಕ್ಕೆ ಬಾರದ ವ್ಯಕ್ತಿಗಳ ಜತೆ ಕಾಲ ಕಳೆಯಬೇಡಿ. ಅದರಿಂದ ನಿಮಗೇನೂ ಪ್ರಯೋಜನವಿಲ್ಲ. ನಿಮ್ಮ ಕಾರ್ಯಕ್ಕೆ ಹೆಚ್ಚು ಗಮನ ಕೊಡುವುದೊಳಿತು.
ತುಲಾ
ಜನಪ್ರಿಯತೆಯಿಂದ ದೂರವಾಗಿ ಬದುಕಲು ಬಯಸುವಿರಿ. ಇತರರ ಜತೆ ಬೆರೆಯುವುದನ್ನು ದೂರ ಮಾಡುವಿರಿ. ಏಕಾಂಗಿತನದಿಂದ ಸಮಾಧಾನ .
ವೃಶ್ಚಿಕ
ಕಳೆದ ಕೆಲವು ದಿನಗಳ ಕಠಿಣ ಕೆಲಸವು ಇಂದು ಫಲ ನೀಡಬಹುದು. ಕುಟುಂಬದ ಜತೆ ಸಂತೋಷದ ಕಾಲ ಕಳೆಯುವ ಅವಕಾಶ. ಆರ್ಥಿಕ ಸ್ಥಿರತೆ.
ಧನು
ಸಂತೋಷವನ್ನು ಹೊರಗೆ ಹುಡುಕಬೇಡಿ. ಅದನ್ನು ಮನಸ್ಸಿನೊಳಗೇ ಹುಡುಕಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭ ಬೆಳವಣಿಗೆ.
ಮಕರ
ಆರ್ಥಿಕ ಲಾಭದ ಸಂಕೇತವಿದೆ. ಹತ್ತಿರದ ಬಂಧುಗಳಿಂದ ಒಳ್ಳೆಯ ಸುದ್ದಿ ಕೇಳುವಿರಿ. ನೆರೆಕರೆಯ ಜತೆಗಿನ ಭಿನ್ನಾಭಿಪ್ರಾಯ ನಿವಾರಣೆ.
ಕುಂಭ
ಯುವಕರು ಹಿರಿಯರ ಜತೆ ಭಿನ್ನಾಭಿಪ್ರಾಯ ತೋರುತ್ತಾರೆ. ಹೊಂದಾಣಿಕೆ ಅವಶ್ಯ. ವ್ಯವಹಾರದಲ್ಲಿ ಆತಂಕ. ಕೌಟುಂಬಿಕ ಅಸಮಾಧಾನ.
ಮೀನ
ಹಿರಿಯ ವ್ಯಕ್ತಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು. ಯುವಕರಿಗೆ ಉತ್ಸಾಹ ಭಂಗ. ಕೆಲಸದಲ್ಲಿ ನಿರಾಸಕ್ತಿ. ಕೌಟುಂಬಿಕ ಬಿಕ್ಕಟ್ಟು.