Sunday, December 3, 2023

Latest Posts

ಬ್ರಿಟಿಷರನ್ನು ಆದಷ್ಟು ಶೀಘ್ರ ದೇಶದಿಂದ ಹೊರದಬ್ಬುವುದು ಸತ್ಯಮೂರ್ತಿ ಹೋರಾಟದ ಧ್ಯೇಯವಾಗಿತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಸುಂದರ ಶಾಸ್ತ್ರಿ ಸತ್ಯಮೂರ್ತಿ (19 ಆಗಸ್ಟ್ 1887 – 28 ಮಾರ್ಚ್ 1943) ಒಬ್ಬ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. 1887 ರಲ್ಲಿ ತಮುಳುನಾಡಿನ ಪುದುಕೊಟ್ಟೈ ಬಳಿಯ ತಿರುಮಯಂನಲ್ಲಿ ಜನಿಸಿದರು. ಸತ್ಯಮೂರ್ತಿ ಅವರು ಮಹಾರಾಜ ಕಾಲೇಜು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜು ಮತ್ತು ಮದ್ರಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಕೆಲವು ಕಾಲ ವಕೀಲರಾಗಿ ಅಭ್ಯಾಸ ಮಾಡಿದ ನಂತರ, ಸತ್ಯಮೂರ್ತಿ ಅವರು ಪ್ರಮುಖ ವಕೀಲರು ಮತ್ತು ರಾಜಕಾರಣಿ ಎಸ್.ಶ್ರೀನಿವಾಸ ಅಯ್ಯಂಗಾರ್ ಅವರ ಸಲಹೆಯ ಮೇರೆಗೆ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ತಮ್ಮ ವಾಕ್ಚಾತುರ್ಯಕ್ಕಾಗಿ ಹೆಚ್ಚು ಮೆಚ್ಚುಗೆ ಪಡೆದಿದ್ದರು ಮತ್ತು ಮದ್ರಾಸ್ ಪ್ರೆಸಿಡೆನ್ಸಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಎಸ್. ಶ್ರೀನಿವಾಸ ಅಯ್ಯಂಗಾರ್, ಸಿ. ರಾಜಗೋಪಾಲಾಚಾರಿ ಮತ್ತು ಟಿ. ಪ್ರಕಾಶಂ ಸತ್ಯಮೂರ್ತಿಯವರ ಒಡನಾಟ ಹೊಂದಿದ್ದರು.
1954 ರಿಂದ 1962 ರ ವರೆಗೆ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆ. ಕಾಮರಾಜ್ ಅವರ ಮಾರ್ಗದರ್ಶಕರಾಗಿ ಪರಿಗಣಿಸಲ್ಪಟ್ಟರು. ಸತ್ಯಮೂರ್ತಿ ಅವರು ಬಂಗಾಳದ ವಿಭಜನೆ, ರೌಲತ್ ಕಾಯಿದೆ, ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಮತ್ತು ಸೈಮನ್ ಆಯೋಗದ ವಿರುದ್ಧದ ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಬ್ರಿಟಿಷರನ್ನು ದೇಶದಿಂದ ಆದಷ್ಟು ಶೀಘ್ರ ಹೊರದಬ್ಬುವುದು ಸತ್ಯಮೂರ್ತಿ ಹೋರಾಟದ ಧ್ಯೇಯವಾಗಿತ್ತು.
ಸತ್ಯಮೂರ್ತಿಯವರು 1930 ರಿಂದ 1934 ರವರೆಗೆ ಸ್ವರಾಜ್ ಪಕ್ಷದ ಪ್ರಾಂತೀಯ ಘಟಕದ ಅಧ್ಯಕ್ಷರಾಗಿದ್ದರು ಮತ್ತು 1936 ರಿಂದ 1939 ರವರೆಗೆ ತಮಿಳುನಾಡು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ಅವರು 1934 ರಿಂದ 1940 ರವರೆಗೆ ಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿದ್ದರು ಮತ್ತು 1939 ರಿಂದ 19439 ರವರೆಗೆ ಮದ್ರಾಸ್ ಮೇಯರ್ ಆಗಿದ್ದರು. ಸತ್ಯಮೂರ್ತಿ 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಜೈಲು ಪಾಲಾದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು, ಆದರೆ ಹೃದಯಾಘಾತದಿಂದಾಗಿ 28 ಮಾರ್ಚ್ 1943 ರಂದು ನಿಧನರಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!