ಕತ್ತೆ ಹಾಗೂ ಅದರ ಮಾಲೀಕ ಹೀಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಿಸ್ ಆಗಿ ಕತ್ತೆ ಹೊಂಡಕ್ಕೆ ಬಿದ್ದು ಬಿಟ್ಟಿತು. ಕತ್ತೆಯನ್ನು ಒಬ್ಬನೇ ಯಕ್ತಿ ಮೇಲೆಳೆಯೋದಕ್ಕೆ ಸಾಧ್ಯವೇ? ತನ್ನ ಕೈಲಾದ ಎಲ್ಲಾ ಪ್ರಯತ್ನ ಮಾಡಿ ಕತ್ತೆಯ ಮಾಲೀಕ ಸುಸ್ತಾದ. ಕತ್ತೆ ಕಥೆ ಈಗ ಮುಗಿಯಿತು, ಇನ್ನೇನೂ ಮಾಡೋಕೆ ಸಾಧ್ಯ ಇಲ್ಲ. ಕತ್ತೆಯನ್ನು ಇಲ್ಲಿಯೇ ಮಣ್ಣು ಮಾಡಿಬಿಡೋಣ ಎಂದು ಆಲೋಚಿಸಿದ.
ಎಲ್ಲ ಆಲೋಚಿಸಿದ್ದೂ ಆಯ್ತು, ಬೇರೆ ದಾರಿಯೇ ಇಲ್ಲ. ಕತ್ತೆಯನ್ನು ಮಣ್ಣು ಮಾಡಲು ಹೆಂಟೆ ಮಣ್ಣು ತಂದು ಸುರಿದ. ಕತ್ತೆ ಮಣ್ಣನ್ನು ಮೈಯಿಂದ ಕೊಡವಿ ಕೆಳಗೆ ಹಾಕಿತು, ಒಂದು ಹೆಜ್ಜೆ ಮೇಲೆ ಬಂತು. ಹೀಗೆ ಮಧ್ಯಾನದೊಳಗೆ ಕತ್ತೆ ಎಲ್ಲಾ ಮಣ್ಣನ್ನು ಕೊಡವಿ ಕೆಳಗೆ ಹಾಕಿ ರಸ್ತೆ ಎತ್ತರಕ್ಕೇ ಬಂದುಬಿಟ್ಟಿತು. ತನ್ನ ಪ್ರಾಣ ಉಳಿಸಿಕೊಂಡಿತು.
ಜೀವನದಲ್ಲಿಯೂ ಹೀಗೆ ಆಗಾಗ ಏಳಲಾರದ ಹೊಂಡಕ್ಕೆ ಬಿದ್ದುಬಿಡುತ್ತೀವಿ. ಆದರೆ ಅಲ್ಲೇ ಸಾಯಬೇಕೋ ಅಥವಾ ಸಮಸ್ಯೆಗಳನ್ನು ಕೊಡವಿ ಮೇಲೇಳಬೇಕೋ ಅದು ನಮಗೆ ಬಿಟ್ಟಿದ್ದು!