ಹೊಸದಿಗಂತ ಡಿಜಿಟಲ್ ಡೆಸ್ಕ್
ಸೊಳ್ಳೆಗಳನ್ನು ಯಕಶ್ಚಿತ್ ಒಂದು ಕೀಟ ಎಂದು ನಿರ್ಲಕ್ಷಿಸುವಂತೇ ಇಲ್ಲ. ಅದರ ಒಂದು ಸಣ್ಣ ಕುಟುಕು ಕೂಡ ಮಾರಣಾಂತಿಕವಾಗಬಹುದು!. ಈ ಸಣ್ಣ ರಕ್ತಹೀರುವ ಕೀಟ ಕಚ್ಚಿದರೆ ದೇಹದಲ್ಲೇಲ್ಲಾ ಕಿರಿಕಿರಿ ಆಗುವ ಜೊತೆಗೆ ಡೆಂಗ್ಯೂ, ಮಲೇರಿಯಾದಂತಹ ಮಾರಕ ರೋಗಗಳನ್ನು ಬಳುವಳಿಯಾಗಿ ನೀಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಯ ಜೀವಕ್ಕೆ ಸೊಳ್ಳೆಗಳು ಆಪತ್ತು ತಂದೊಡ್ಡಿವೆ. ಜರ್ಮನಿಯ ಯುವಕನೊಬ್ಬ ಸೊಳ್ಳೆ ಕಡಿತದಿಂದ ಸಾವಿನ ದವಡೆ ವರೆಗೆ ಹೋಗಿ ಬಂದಿದ್ದಾನೆ. ಒಂದು ಸೊಳ್ಳೆ ಆತನ ಜೀವನದಲ್ಲಿ ಹೇಗೆ ಆಟವಾಡಿದೆ ಎಂಬುದನ್ನು ಕೇಳಿದರೆ ಅಚ್ಚರಿಗೊಳ್ಳುತ್ತೀರಿ.
2021 ರ ಬೇಸಿಗೆಯ ತಿಂಗಳುಗಳಲ್ಲಿ ಜರ್ಮನಿಯ ರೋಡರ್ಮಾರ್ಕ್ನ ನಿವಾಸಿ 27 ವರ್ಷ ವಯಸ್ಸಿನ ಸೆಬಾಸ್ಟಿಯನ್ ರೊಟ್ಷ್ಕೆ ಎಂಬಾತ ಏಷ್ಯನ್ ಹುಲಿ ಸೊಳ್ಳೆಯಿಂದ ಕಚ್ಚಿಸಿಕೊಂಡಿದ್ದ. ಆ ಬಳಿಕ ಆತನ ಜೀವನವೇ ಸಂಕಷ್ಟದಲ್ಲಿದೆ.
ಈ ಸೊಳ್ಳೆ ಕಡಿತದಿಂದ ಸೆಬಾಸ್ಟಿಯನ್ ವೆಸ್ಟ್ ನೈಲ್ ವೈರಸ್ ಮತ್ತು ಡೆಂಗ್ಯೂ ಜ್ವರಕ್ಕೆ ಒಳಗಾದ. ಆತನ ರಕ್ತ ವಿಷಮಯವಾಯತು. ಇದರಿಂದ ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶಗಳ ವೈಫಲ್ಯ ಉಂಟಾಯ್ತು. ಸೆರಾಟಿಯಾ ಮಾರ್ಸೆಸೆನ್ಸ್ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾವು ಅವನ ಎಡ ತೊಡೆಯ ಅರ್ಧದಷ್ಟು ಭಾಗವನ್ನು ತಿಂದುಹಾಕಿದ್ದರಿಂದ ಅವನು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದರು. ಈ ಸಂದರ್ಭದಲ್ಲಿ ಸೆಬಾಸ್ಟಿಯನ್ ಅವರ ಎರಡು ಕಾಲ್ಬೆರಳುಗಳನ್ನು ಕತ್ತರಿಸಿ ಹಾಕಲಾಯಿತು. ಜೊತೆಗೆ ಆತನ ಜೀವ ಉಳಿಸಲು ಮೂವತ್ತು ಬಾರಿ ಆಪರೇಶನ್ ನಡೆಸಬೇಕಾಯ್ತು. ಮತ್ತು ಆತ 4 ವಾರಗಳ ಕಾಲ ಕೋಮಾ ಸ್ಥಿತಿಗೆ ಹೋಗಿದ್ದ. ಇದೀಗ ಆತನ ಆರೋಗ್ಯ ಕೊಂಚ ಸುಧಾರಿಸಿದೆ.
ಸೊಳ್ಳೆ ಕಡಿತದಿಂದ ಸಾವಿನತ್ತ ಹೋಗಿಬಂದ ಅನುಭವ ವಿವರಿಸಿರುವ ಸೆಬಾಸ್ಟಿಯನ್, “ನಾನು ವಿದೇಶಕ್ಕೆ ಹೋಗಿಲ್ಲ. ಆ ಸೊಳ್ಳೆ ಸೊಳ್ಳೆ ಕಚ್ಚಿರಬೇಕು. ಅದು ಕಚ್ಚಿದ ಬಳಿಕ ನಾನು ಹಾಸಿಗೆ ಹಿಡಿದೆ, ಬಾತ್ರೂಮ್ಗೆ ಹೋಗಲು ಆಗುತ್ತಿರಲಿಲ್ಲ. ಜ್ವರ ಬಂದಿದ್ದರಿಂದ ಏನನ್ನು ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಅದು ಕೊನೆಗೊಳ್ಳುತ್ತಿದೆ ಎಂದು ನಾನು ಭಾವಿಸಿದೆ. ಇದ್ದಕ್ಕಿದ್ದಂತೆ, ನನ್ನ ಎಡ ತೊಡೆಯ ಮೇಲೆ ಒಂದು ದೊಡ್ಡ ಬಾವು ರೂಪುಗೊಂಡಿತು. ಏಷ್ಯನ್ ಹುಲಿ ಸೊಳ್ಳೆ ಕಚ್ಚುವಿಕೆಯೇ ಇದಕ್ಕೆಲ್ಲ ಕಾರಣ ಎಂದು ವೈದ್ಯರು ಬೇಗನೆ ಊಹಿಸಿದರು ಮತ್ತು ತಕ್ಷಣವೇ ತೀವ್ರ ನಿಗಾ ಘಟಕಕ್ಕೆ ಕರೆದೊಯ್ದರು. ಮತ್ತು ಅಲ್ಲಿ ಚಿಕಿತ್ಸೆ ನೀಡಲಾಯಿತು. ನನ್ನ ಕಾಲ್ಬೆರಳುಗಳು ಹೋಗಿರಬಹುದು ಆದರೆ, ಜೀವ ಉಳಿದಿದ್ದಕ್ಕಡೆ ಖುಷಿಪಡುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ