ಸ್ನೇಹಿತರಿಗಿಲ್ಲ ಚಿಕನ್ ಊಟ, ಮದುವೆಯೇ ಬೇಡ ಎಂದು ಪಟ್ಟುಹಿಡಿದ ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವ್ಯವುದೋ ವಿಚಿತ್ರ ಕಾರಣಗಳಿಗೆ ಮದುವೆಗಳು ನಿಂತುಹೋಗುತ್ತವೆ. ಮದುವೆಯ ಲೆಹೆಂಗಾ ಸರಿ ಇಲ್ಲವೆಂದು, ವರನ ಕಡೆಯವರಿಗೆ ವಸತಿ ಸರಿಯಿಲ್ಲ ಎಂದು..
ಆದರೆ ಹೈದರಾಬಾದ್‌ನ ಶಹಪುರದಲ್ಲಿ ವರನ ಸ್ನೇಹಿತರಿಗೆ ಚಿಕನ್ ಊಟ ಇಲ್ಲ ಎಂದು ಮದುವೆ ನಿಂತಿದೆ.

ಹೌದು, ಶಹಪುರದಲ್ಲಿ ಕುತ್ಬಳ್ಳಾಪುರದ ವಧು ಹಾಗೂ ರಿಂಗ್‌ಬಸ್ತಿಯ ವರ ಹಸೆಮಣೆ ಏರುವ ತಯಾರಿಯಲ್ಲಿ ಇದ್ದರು. ಸಂಭ್ರಮದ ಮದುವೆಯ ಔತಣಕೂಟ ಮುಗಿಯುವ ವೇಳೆಗೆ ವರನ ಸ್ನೇಹಿತರು ಬಂದಿದ್ದಾರೆ. ಮಾರ್ವಾಡಿ ಕುಟುಂಬದ ವಧು ಮನೆಯವರು ಸಸ್ಯಹಾರಿ ಭೋಜನ ತಯಾರಿಸಿದ್ದರು.

ಈ ಊಟ ಬೇಡ, ಚಿಕನ್ ಬೇಕು ಎಂದು ವರನ ಸ್ನೇಹಿತರು ಪಟ್ಟು ಹಿಡಿದಿದ್ದಾರೆ. ಆದರೆ ನಾನ್‌ವೆಜ್ ಅಡುಗೆ ಮಾಡಿಲ್ಲ ಎಂದು ವಧು ಕುಟುಂಬದವರು ಹೇಳಿದ್ದಾರೆ. ಮಾಡಿಲ್ಲ ಎಂದರೂ ಪರವಾಗಿಲ್ಲ ಈಗ ಮಾಡಿಕೊಡಿ ಎಂದು ವರನ ಸ್ನೇಹಿತರು ಕೇಳಿದ್ದಾರೆ. ಮದುವೆ ಮನೆಯಲ್ಲಿ ನಾನ್‌ವೆಜ್ ಮಾಡುವುದಿಲ್ಲ ಎಂದು ಹೇಳಿದ್ದಕ್ಕೆ ಸಿಟ್ಟಾಗಿ ಎದ್ದು ಹೋಗಿ ವರನಿಗೆ ಹೇಳಿದ್ದಾರೆ. ಈ ವಿಷಯಕ್ಕೆ ಎರಡೂ ಮನೆಯಲ್ಲಿ ವಾಗ್ವಾದ ನಡೆದಿದ್ದು, ಮದುವೆಯೇ ನಿಂತಿದೆ.

ತದನಂತರ ಠಾಣೆಗೆ ಎರಡೂ ಕುಟುಂಬದವರು ಹೋಗಿದ್ದು, ಸಂಧಾನ ಮಾಡಲಾಗಿದೆ. ಸಂಧಾನದ ನಂತರ ಮತ್ತೆ ಮದುವೆಗೆ ಎಲ್ಲರೂ ಒಪ್ಪಿದ್ದು, ನಾಳೆ ಮತ್ತೆ ಮದುವೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!