ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಬಸ್ ದರದಿಂದ ಹಿಡಿದು ರೈಲು ದರದವರೆಗೆ ಎಲ್ಲವೂ ಏರಿಕೆಯಾಗುತ್ತಿದೆ. ಕೊನೆಗೆ ಪ್ಲಾಟ್ ಫಾರಂ ಟಿಕೆಟ್ ಕೂಡ ಹೆಚ್ಚಿದೆ. ಇಂತಹ ಸಂದರ್ಭಗಳಲ್ಲಿ IRCTC ‘ಭಾರತ್ ಗೌರವ್ ರೈಲಿನ’ ಟಿಕೆಟ್ ಶುಲ್ಕವನ್ನು ಕಡಿಮೆ ಮಾಡಲು ಯೋಜಿಸಿದೆ. ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣದಿಂದಾಗಿ (ಆಕ್ಯುಪೆನ್ಸಿ ದರ) ಟಿಕೆಟ್ ಶುಲ್ಕವನ್ನು 20 ರಿಂದ 30 ರಷ್ಟು ಕಡಿಮೆ ಮಾಡಲು ಇನ್ನಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಐಆರ್‌ಸಿಟಿಸಿ ಕನಿಷ್ಠ ಎರಡು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರದ್ದುಗೊಳಿಸಬೇಕಾದ ಪರಿಸ್ಥಿತಿ ಇದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೈಲುಗಳಿಗೆ ಹೋಲಿಸಿದರೆ ಭಾರತ ದರ್ಶನ ರೈಲುಗಳಲ್ಲಿ ಪ್ರಯಾಣ ದರ ಕಡಿಮೆ ಎಂಬ ಅಭಿಪ್ರಾಯಗಳಿವೆ. ಈ ಕ್ರಮದಲ್ಲಿ, IRCTC ಭಾರತ್ ಗೌರವ್ ರೈಲುಗಳಲ್ಲಿ AC 3 ಶ್ರೇಣಿಯ ದರಗಳನ್ನು ಕಡಿಮೆ ಮಾಡಲು ಯೋಜಿಸುತ್ತಿದೆ. ಅದಕ್ಕೆ ಅನುಮೋದನೆ ಕೂಡ ಸಿಕ್ಕಂತಾಗಿದೆ. ಐಆರ್‌ಸಿಟಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಸ್ವದೇಶ್ ದರ್ಶನ್ ಯೋಜನೆಯಡಿ ರಾಮಾಯಣ ಸರ್ಕ್ಯೂಟ್‌ನಲ್ಲಿ ಈ ರೈಲಿನ ಒಂದು ಸೇವೆಯನ್ನು ಮಾತ್ರ ನಿರ್ವಹಿಸುವಲ್ಲಿ IRCTC ಯಶಸ್ವಿಯಾಗಿದೆ. ಭಾರತ್ ಗೌರವ್ ಪ್ರವಾಸೋದ್ಯಮ ರೈಲಿನಲ್ಲಿ 18 ದಿನಗಳ ಪ್ಯಾಕೇಜ್‌ಗೆ AC-III ವರ್ಗದ ಬೆಲೆ ರೂ. 62,000. 2021 ರಲ್ಲಿ, ಭಾರತದ ಸಾಂಸ್ಕೃತಿಕ, ಪರಂಪರೆ, ಪ್ರಸಿದ್ಧ ಐತಿಹಾಸಿಕ ಸ್ಥಳಗಳು ಮತ್ತು ಪ್ರಮುಖ ಯಾತ್ರಾ ಸ್ಥಳಗಳ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಭಾರತ್ ಗೌರವ್ ರೈಲುಗಳನ್ನು ರೈಲ್ವೆ ಪ್ರಾರಂಭಿಸಿತು. ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ರಾಮಾಯಣ ಸರ್ಕ್ಯೂಟ್ ಅಡಿಯಲ್ಲಿ ಹೊರಡುವ ಈ ರೈಲು ಹಲವು ಐತಿಹಾಸಿಕ ಸ್ಥಳಗಳನ್ನು ಸುತ್ತಿದ ನಂತರ ನೇಪಾಳವನ್ನು ತಲುಪಲಿದೆ. 18 ದಿನಗಳ ಈ ಪ್ರಯಾಣಕ್ಕೆ ಟಿಕೆಟ್ ಬೆಲೆ ರೂ.62 ಸಾವಿರ.
ಆರಂಭದಲ್ಲಿ ಈ ರೈಲಿಗೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬರುಬರುತ್ತಾ ಅದೆಲ್ಲವೂ ಕಡಿಮೆಯಾಗಿದೆ. ಟಿಕೆಟ್ ದರ ಹೆಚ್ಚಿದೆ ಎಂಬ ಅಭಿಪ್ರಾಯಗಳು ಬರುತ್ತಿವೆ. ಇದಲ್ಲದೇ, 15 ವರ್ಷ ಹಳೆಯದಾದ ಐಸಿಎಫ್ ಕೋಚ್‌ಗಳಿಂದ ಪ್ರಯಾಣಿಕರು ಅನಾನುಕೂಲ ಅನುಭವಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ಪ್ರಯಾಣಿಕರಿಂದ ಬರುತ್ತಿವೆ. ಬೇರೆ ದಾರಿ ಇಲ್ಲದೆ ಟಿಕೆಟ್ ದರ ಇಳಿಸಲೇಬೇಕಾದ ಪರಿಸ್ಥಿತಿಯಿದ್ದು IRCTC ಈ ದಿಕ್ಕಿನಲ್ಲಿ ಯೋಜಿಸುತ್ತಿದೆ.