ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಷ್ಪ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿರುವ ಅಲ್ಲು ಅರ್ಜುನ್ ಹಾಗೂ ರಶ್ಮಿಕಾರಷ್ಟೇ ಹೆಸರು ಮಾಡಿದ್ದು ಸಮಂತಾ.
ಒಂದು ಐಟಂ ಸಾಂಗ್‌ನಿಂದಲೇ ಕೋಟಿ ಕೋಟಿ ಗಳಿಸಿದ ಸಮಂತಾಗೆ ಇದೀಗ ಅನಾರೋಗ್ಯ ಕಾಡಿದೆ. ಇನ್ನೇನು ಪುಷ್ಪ-2 ಶೂಟಿಂಗ್ ಆರಂಭವಾಗಲಿದ್ದು, ಈ ಬಾರಿ ಐಟಂ ಸಾಂಗ್‌ನಲ್ಲಿ ಸಮಂತಾ ಹೆಜ್ಜೆ ಹಾಕೋದಿಲ್ಲ.
ಇವರ ಬದಲು ಇದೀಗ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಪುಷ್ಪ ಟೀಂ ಸೇರಲಿದ್ದಾರೆ. ಐಟಂ ಸಾಂಗ್‌ನಲ್ಲಿ ಅಲ್ಲು ಜೊತೆ ಹೆಜ್ಜೆ ಹಾಕಲಿದ್ದು, ದಾಖಲೆ ಸೃಷ್ಟಿಸುತ್ತಾರಾ ಕಾದು ನೋಡಬೇಕಿದೆ.