ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇದೀಗ ಪಠಾಣ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ.
2023 ರಲ್ಲಿ ಶಾರುಖ್ ಅಭಿನಯದ ಸಾಲು ಸಾಲು ಸಿನಿಮಾಗಳು ತೆರೆಕಾಣಲಿವೆ. ಆದರೆ ಪಠಾಣ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
ಪಠಾಣ್ ಸಿನಿಮಾಗಾಗಿ ಶಾರುಖ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಈಗಾಗಲೇ ಎಂಟು ದೇಶಗಳಲ್ಲಿ ಪಠಾಣ್ ಶೂಟಿಂಗ್ ನಡೆದಿದೆ.
ದೀಪಿಕಾ ಪಡುಕೋಣ್ ಹಾಗೂ ಜಾನ್ ಅಬ್ರಾಹಂ ಕೂಡ ಸಿನಿಮಾದಲ್ಲಿದ್ದು, ಇದು ಸಿನಿಮಾ ಪ್ಲಸ್ ಪಾಯಿಂಟ್ ಆಗಿದೆ. ಮುಂದಿನ ವರ್ಷ ಜನವರಿ 25 ರಂದು ಸಿನಿಮಾ ರಿಲೀಸ್ ಆಗಲಿದೆ. ಸಿನಿಮಾದ ಸಾಹಸ ದೃಶ್ಯಗಳ ಮೇಲೆ ಭಾರೀ ನಿರೀಕ್ಷೆ ಇದೆ.