ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಅಚ್ಚರಿಯ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು. ಯಾತ್ರೆಯ ನಡುವೆ ವಿರಾಮ ಪಡೆದು ಚಹಾ ಕುಡಿಯಲು ನಿಂತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಶ್ವಾನವೊಂದು ಓಡೋಡುತ್ತಾ ಬಂದು ಹೂಗುಚ್ಛ ನೀಡಿ ಸ್ವಾಗತಿಸಿ ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು.
ಆರು ವರ್ಷ ಪ್ರಾಯದ ಲ್ಯಾಬ್ರಡಾರ್ ವರ್ಗದ ಈ ಶ್ವಾನ ಇಂದೋರ್ ಮೂಲದ ಸರ್ವಮಿತ್ರ ನಾಚನ್ ಎಂಬವರದ್ದಾಗಿದೆ. ಅವರು ರಾಹುಲ್ ಅವರನ್ನು ಸ್ವಾಗತಿಸಲು ತನೋಡಿಯಾ ಪಟ್ಟಣಕ್ಕೆ ಬಂದಿದ್ದು, ಈ ವೇಳೆ ತರಬೇತಿ ನೀಡಲಾಗಿದ್ದ ಲಿಜೋ ಹಾಗೂ ರೆಕ್ಸಿ ಹೆಸರಿನ ಈ ಶ್ವಾನಗಳು ಚಲೇ ಕದಮ್, ಜೋಡ್ ವತನ್, ನಫ್ರತ್ ಛೋಡೋ, ಭಾರತ್ ಜೋಡೋ ಎಂಬ ಸಂದೇಶ ಹೊತ್ತ ಹೂಗುಚ್ಛಗಳ ಬುಟ್ಟಿಯನ್ನು ಹಿಡಿದು ತಂದು ರಾಹುಲ್ ಗಾಂಧಿ ಅವರಿಗೆ ಹಸ್ತಾಂತರಿಸಿದೆ.
ಇನ್ನು ನಾವು ಯಾತ್ರೆಗಾಗಿ ವಿಭಿನ್ನವಾದದ್ದನ್ನು ಮಾಡಲು ಬಯಸಿದ್ದು, ನಾವು ಅದನ್ನು ಮೊದಲಿನಿಂದಲೂ ಅನುಸರಿಸುತ್ತಿದ್ದೇವೆ. ಇದರ ಭಾಗವಾಗಿ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು ಎಂದು ಶ್ವಾನಗಳ ಮಾಲಿಕರು ಹೇಳಿದ್ದಾರೆ.