ಹರಿಪ್ರಿಯಾ-ವಸಿಷ್ಠ ಎಂಗೇಜ್ ಮೆಂಟ್ ಆಗಿದ್ದು ಪಕ್ಕಾ ಎನ್ನುತ್ತಿದೆ ವೈರಲ್ ಆದ ಈ ಫೋಟೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸ್ಯಾಂಡಲ್​ವುಡ್​ನ ನಲ್ಲಿ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿರುವ ವಸಿಷ್ಠ ಸಿಂಗ ಮತ್ತು ಹರಿಪ್ರಿಯಾ ಅವರ ನಿಶ್ಚಿತಾರ್ಥ ಶುಕ್ರವಾರ ನಡೆದಿತ್ತು ಎಂಬ ಸುದ್ದಿ ಕೇಳಿ ಬಂದಿತ್ತು. ಇದೀಗ ಅದಕ್ಕೆ ಪೂರಕವಾಗಿ ನಿಶ್ಚಿತಾರ್ಥದ ಫೋಟೋಗಳು ಕೊನೆಗೂ ಬಹಿರಂಗವಾಗಿವೆ.

ಈ ನಿಶ್ಚಿತಾರ್ಥದಲ್ಲಿ ಎರಡೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ಈ ನಿಶ್ಚಿತಾರ್ಥದ ಒಂದಿಷ್ಟು ಫೋಟೋಗಳು ಈಗ ವೈರಲ್​ ಆಗುತ್ತಿವೆ.

ಕಳೆದ ಕೆಲವು ದಿನಗಳಿಂದ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮದುವೆಯ ಬಗ್ಗೆ ಸುದ್ದಿ ಕೇಳಿ ಬರುತ್ತಿತ್ತು. ಆದರೆ, ಯಾರೊಬ್ಬರೂ ಮಾತನಾಡಿರಲಿಲ್ಲ. ಎಷ್ಟೇ ಚರ್ಚೆಗಳಾದರೂ, ಇಬ್ಬರೂ ಸುಮ್ಮನೆ ಇದ್ದರು.

ಇದೀಗ ಎಂಗೇಜ್​ಮೆಂಟ್​ನ ಫೋಟೋಗಳೇ ಬಹಿರಂಗವಾಗಿರುವುದರಿಂದ, ಸಿಂಹ ಮತ್ತು ಹರಿಪ್ರಿಯಾ ನಡುವಿನ ಸುದ್ದಿ ಕೇವಲ ಊಹಾಪೋಹ ಅಥವಾ ಗಾಳಿಸುದ್ದಿಯಲ್ಲ ಎಂದು ಸಾಬೀತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!