ಹೊಸದಿಗಂತ ಡಿಜಿಟಲ್ ಡೆಸ್ಕ್
ಮಧ್ಯ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದಾತ್ಮಕ ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ ಅಲಿಯಾಸ್ ‘ಕಂಪ್ಯೂಟರ್ ಬಾಬಾ’ ಶನಿವಾರ ಭಾಗವಹಿಸಿದ್ದು, ಕಾಂಗ್ರೆಸ್ ವಿರುದ್ಧ ಆಡಳಿತಾರೂಢ ಬಿಜೆಪಿ ವಾಗ್ದಾಳಿ ನಡೆಸಿದೆ.
ಇಂದು ಬೆಳಗ್ಗೆ ಅಗರ್ ಮಾಲ್ವಾ ಜಿಲ್ಲೆಯ ಮಹುದಿಯಾ ಗ್ರಾಮದಲ್ಲಿ ತ್ಯಾಗಿ ಯಾತ್ರೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ನಾಮದೇವ್ ದಾಸ್ ಇಂದೋರ್ ಬಳಿಯ ಅವರ ಆಶ್ರಮದಲ್ಲಿ ಆಪಾದಿತ ಅಕ್ರಮ ನಿರ್ಮಾಣವನ್ನು ಕೆಡವುವ ಮೊದಲು ಪಂಚಾಯತ್ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 2020 ರಲ್ಲಿ ಬಂಧಿಸಲಾಗಿತ್ತು.
ಇದೀಗ ಕಾಂಗ್ರೆಸ್ ಮೇಲೆ ಬಿಜೆಪಿ ಮುಗಿಬಿದ್ದಿದ್ದು, ಇದು ಯಾವ ರೀತಿಯ ಜೋಡೋ ಯಾತ್ರೆ? ಕಂಪ್ಯೂಟರ್ ಬಾಬಾ’ ಸರ್ಕಾರಿ ಭೂಮಿ ಒತ್ತುವರಿ ಮತ್ತಿತರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜೈಲಿಗೂ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ಮುಖಂಡ ನರೇಂದ್ರ ಸಲೂಜಾ ವಾಗ್ದಾಳಿ ನಡೆಸಿದ್ದಾರೆ.