ವಧುವಿನ ಕಡೆಯವರು ಕೊಟ್ಟ 11 ಲಕ್ಷ ರೂ ವರದಕ್ಷಿಣೆಯನ್ನು ಮರಳಿ ಹಿಂತಿರುಗಿಸಿ ಮಾದರಿಯಾದ ವರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮದುವೆಯಲ್ಲಿ ವರದಕ್ಷಿಣೆಯಾಗಿ ಪಡೆದಿದ್ದ 11 ಲಕ್ಷ ರೂಪಾಯಿ ನಗದು ಮತ್ತು ಆಭರಣಗಳನ್ನು ವಧುವಿನ ಪೋಷಕರಿಗೆ ಹಿಂದಿರುಗಿಸುವ ಮೂಲಕ ಉತ್ತರ ಪ್ರದೇಶದ ವರನೊಬ್ಬ ಮಾದರಿಯಾಗಿದ್ದಾನೆ.
ಇಲ್ಲಿನ ಮುಜಫರ್ನಗರದ ತಿಟಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಲಖನ್ ಗ್ರಾಮದಲ್ಲಿ ಕಂದಾಯ ಅಧಿಕಾರಿ (ಲೇಖಪಾಲ್)ಯಾಗಿರುವ ವರ ಸೌರಭ್ ಚೌಹಾಣ್ ಮತ್ತು ನಿವೃತ್ತ ಸೇನಾ ಜವಾನನ ಮಗಳಾದ ವಧು ಪ್ರಿನ್ಸ್ ವಿವಾಹ ನಡೆದಿತ್ತು. ಈ ವೇಳೆ ಸ್ಥಳೀಯ ಸಂಪ್ರದಾಯದಂತೆ ವರನಿಗೆ ವಧುವಿನ ಪೋಷಕರು 11 ಲಕ್ಷ ರೂ. ಗಳನ್ನು ವರದಕ್ಷಿಣೆಯಾಗಿ ನೀಡಿದ್ದರು.
ಆದರೆ ಈ ಹಣವನ್ನು ಆತ ಮತ್ತೆ ವಧುವಿನ ಪೋಷಕರಿಗೆ ವಾಪಸ್ ನೀಡಿ, ಅದರ ಬದಲಿಗೆ ‘ಶಗುನ್’ ರೂಪದಲ್ಲಿ 1 ರೂ ನಾಣ್ಯವನ್ನು ವರದಕ್ಷಿಣೆಯಾಗಿ ಸ್ವೀಕರಿಸಿದ್ದಾರೆ.
ವರನ ಈ ನಡೆ ಅಲ್ಲಿ ನೆರೆದಿದ್ದವರ ಮೆಚ್ಚುಗೆಗೆ ಕಾರಣವಾಯಿತು. ವರ ವರದಕ್ಷಿಣೆ ವಾಪಸ್ ಮಾಡುತ್ತಲೇ ಅಲ್ಲಿ ನೆರೆದಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!