ಹೊಸದಿಗಂತ ಡಿಜಿಟಲ್ ಡೆಸ್ಕ್
ಕತಾರ್ ನ ಖಲೀಫಾ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಫ್ರೀ ಕ್ವಾಟರ್ ಘರ್ಷಣೆಯಲ್ಲಿ 3-1 ಅಂತರದಲ್ಲಿ ಅಮೇರಿಕಾ ತಂಡವನ್ನು ಬಗ್ಗು ಬಗ್ಗುಬಡಿದ ನೆದರ್ಲ್ಯಾಂಡ್ಸ್ ತಂಡ ಕ್ವಾರ್ಟರ್-ಫೈನಲ್ಗೆ ಪ್ರವೇಶಿಸಿ.
ಈ ನಿರ್ದಯ ಗೆಲುವಿನೊಂದಿಗೆ ಡಚ್ಚರು ಅಮೆರಿಕದ ವಿಶ್ವಕಪ್ ಕನಸನ್ನು ಕೊನೆಗೊಳಿಸಿದ್ದಾರೆ. ಮೆಂಫಿಸ್ ಡಿಪೇ ಮತ್ತು ಡೇಲಿ ಬ್ಲೈಂಡ್ ಸಿಡಿಸಿದ ಗೊಲುಗಳು ನೆದರ್ ಲ್ಯಾಂಡ್ ಗೆ ಮೊದಲಾರ್ಧದಲ್ಲಿ ಮುನ್ನಡೆ ತಂದುಕೊಟ್ಟವು. ದ್ವಿತಿಯಾರ್ಧದಲ್ಲಿ ಡೆನ್ಜೆಲ್ ಡಮ್ಫ್ರೈಸ್ ಸಿಡಿಸಿದ ಗೋಲು ಡಚ್ಚರ ವಿಜಯದ ಮುದ್ರೆಯೊತ್ತಿತು. ತನ್ನ ಮೊದಲ ವಿಶ್ವಕಪ್ ಗೆಲ್ಲುವ ಕನಸಿನಲ್ಲಿರುವ ನೆದರ್ಲ್ಯಾಂಡ್ಸ್ ಕ್ವಾಟರ್ ಫೈನಲ್ ನಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ