ಕಲಬುರಗಿ: ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

ಹೊಸದಿಗಂತ ವರದಿ, ಕಲಬುರಗಿ
ವಿಶ್ವ ಹಿಂದೂ ಪರಿಷತ್ ಬಜರಂಗದಳ ಕನಾ೯ಟಕ ಉತ್ತರ ಕರ್ನಾಟಕದ ವತಿಯಿಂದ ಹನುಮ ಮಾಲಾಧಾರಣೆ ಕಾರ್ಯಕ್ರಮದ ನಿಮಿತ್ತ ಕಲಬುರಗಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಆನೆಗುಂದಿ ಅಂಜನಾದ್ರಿ ಪವ೯ತಕ್ಕೆ ನೂರಾರು ಹನುಮಾ ಮಾಲಾ ಧಾರಿಗಳು ಪ್ರಯಾಣ ಬೆಳೆಸಿದರು.
ನಗರದ ನೆಹರೂ ಗಂಜ್ ಪ್ರದೇಶದ ಹನುಮಾನ ಮಂದಿರದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ನಸುಕಿನ ಜಾವ ಹನುಮಂತನಿಗೆ ರುದ್ರಾಭಿಷೇಕ, ಹೋಮ ಹವನ,ನವಗ್ರಹ ಪೂಜೆಯ ನಂತರ 450 ಜನ ಹನುಮ ಮಾಲಾಧಾರಿಗಳಿಗೆ ಮಾಲಾಧಾರಣೆ ಮಾಡಲಾಯಿತು.
ಕಲಬುರಗಿ ನಗರದ ನೆಹರೂ ಗಂಜ್ ಪ್ರದೇಶದಿಂದ 11 ರಾಜಹಂಸ ಡಿಲಕ್ಸ್ ಬಸ್, ಗಳಿಗೆ ಚಂದು ಪಾಟೀಲ್ ಚಾಲನೆ ನೀಡುವ ಮುಖಾಂತರ ಮಾಲಾಧಾರಣೆ ಮಾಡಿದ ಮಾಲಾಧಾರಿಗಳ ಪ್ರಯಾಣ ಕೊಪ್ಪಳಕ್ಕೆ ಪ್ರಯಾಣ ಬೆಳೆಸಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಜಿಲ್ಲಾ ಅಧ್ಯಕ್ಷ ರಾಜು ನವಲದಿ,ಪ್ರಶಾಂತ್ ಗುಡ್ಡಾ,ಅಶ್ವಿನ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಲಾಧಾರಿಗಳು ಕಲಬುರಗಿಯಿಂದ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನಕ್ಕೆ ತೆರಳಿ,ವಿಶ್ರಾಂತಿ ಪಡೆದು ಬೆಳಿಗ್ಗೆ ಪೂಜೆಯ ನಂತರ ಕಿಷ್ಕಿಂದ ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!