ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ನ ತರ್ನ್ ತರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಮೂರು ಕೆಜಿ ಹೆರಾಯಿನ್ ಜೊತೆಗೆ ಪಾಕ್ ಗೆ ಸೇರದ ಡ್ರೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಗಡಿಯಾಚೆಗಿನ ಕಳ್ಳಸಾಗಣೆ ಜಾಲಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಟಾರ್ನ್ ತರನ್ ಪೊಲೀಸರು ಮತ್ತು ಬಿಎಸ್ಎಫ್ ಜಂಟಿ ಕಾರ್ಯಾಚರಣೆ ನಡೆಸುತ್ತಿದೆ. ತರ್ನ್ ತರನ್ ಪ್ರದೇಶದಲ್ಲಿ ನಡೆಸಿದ ಶೋಧದ ವೇಳೆ 3 ಕೆಜಿ ಹೆರಾಯಿನ್ನೊಂದಿಗೆ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಗಡಿ ಭದ್ರತಾ ಪಡೆ ಶನಿವಾರವಷ್ಟೇ ಫಜಿಲ್ಕಾ ಜಿಲ್ಲೆಯಲ್ಲಿ ಸುಮಾರು 25 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ