Saturday, February 4, 2023

Latest Posts

10 ಮಂದಿ ಎಂ.ಬಿ.ಪಾಟೀಲಗಳು ಬಂದರೂ ನನ್ನನ್ನು ಸೋಲಿಸಲು ಆಗಲ್ಲ: ಯತ್ನಾಳ

ಹೊಸದಿಗಂತ ವರದಿ ವಿಜಯಪುರ:
10 ಮಂದಿ ಎಂ.ಬಿ. ಪಾಟೀಲ ಬಂದರೂ, ನನ್ನನ್ನು ಸೋಲಿಸಲು ಆಗಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನತೆ ಸೋಲಿಸುತ್ತಾರೆ, ಶಾಸಕ ಎಂ.ಬಿ. ಪಾಟೀಲ ಸೋಲಿಸುತ್ತಾರಾ ಎಂದು ಪ್ರಶ್ನಿಸಿದರು. ನನ್ನನ್ನು ಸೋಲಿಸುವ ಎಂ.ಬಿ. ಪಾಟೀಲ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು. ಎಂ.ಬಿ. ಪಾಟೀಲ ಸೋಲಿಸಲು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು, ಓರ್ವ ಮಾಜಿ ಶಾಸಕ ಸೋಲಿಸಲು ತಯಾರಿ ಮಾಡುತ್ತಿದ್ದಾರೆ. ಯಲ್ಲಮ್ಮನ ಗುಡ್ಡದಲ್ಲಿ ಮುಲ್ಲಾಗೆ ಏನು ಕೆಲಸ? ಎಂಬಿಪಿ ಸೋಲಿಸಲು ಅವರೆ ಸನ್ನದ್ಧ ಆಗಿದ್ದಾರೆ ಎಂದು ಕಿಡಿಕಾರಿದರು.
ಹರಿಹರ ವಚನಾನಂದಶ್ರೀ ಬ್ರೋಕರ್ ಸ್ವಾಮಿ‌ ಆಗಿದ್ದಾರೆ. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ವಸೂಲಿ ಮಾಡಿದ್ದಾರೆ.
ಅಲ್ಲದೇ, ಮಾಜಿ ಸಿಎಂ ಬಿಎಸ್ವೈ ಕಡೆಗೆ ಹರಿಹರ ಶ್ರೀ 10 ಕೋಟಿ ಇಸ್ಕೊಂಡಿದ್ದಾರೆ. ಅಲ್ಲದೇ, ಮಠದಲ್ಲಿ ಅವ್ಯವಹಾರ ಮಾಡಿದ್ದಾರೆ. ಅದನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಹರಿಹರಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!