ಸತತ ನಾಲ್ಕನೇ ವಾರವೂ ಏರಿಕೆ: 561.16 ಬಿಲಿಯನ್‌ ಡಾಲರ್‌ಗೆ ತಲುಪಿದೆ ಭಾರತದ ವಿದೇಶಿ ವಿನಿಮಯ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಡಿಸೆಂಬರ್ 9 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 2 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶೀ ವಿನಿಮಯ ಸಂಗ್ರಹವು 11.02 ಶತಕೋಟಿ ಡಾಲರ್‌ ಏರಿಕೆಯಾಗಿ 561.16 ಶತಕೋಟಿ ಡಾಲರ್‌ ಗೆ ತಲುಪಿದೆ. ಇದು ಸತತ ನಾಲ್ಕನೇ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹದಲ್ಲಿನ ಹೆಚ್ಚಳವಾಗಿದೆ. ರೂಪಾಯಿ ಮತ್ತು ಇತರ ಪ್ರಮುಖ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಕುಸಿತದ ನಂತರ ಈ ಏರಿಕೆಯ ಮೌಲ್ಯಮಾಪನ ಮಾಡಲಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

ಮಾರುಕಟ್ಟೆಯಿಂದ ಆರ್‌ಬಿಐ ಯುಎಸ್ ಡಾಲರ್‌ಗಳನ್ನು ಖರೀದಿಸಿರುವುದು ರೂಪಾಯಿ ಚಂಚಲತೆಯನ್ನು ಕಡಿಮೆ ಮಾಡಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ನವೆಂಬರ್ 4, 2022 ಮತ್ತು ಡಿಸೆಂಬರ್ 2, 2022 ರ ನಡುವಿನ ವಾರಗಳಲ್ಲಿ ದೇಶದ ವಿದೇಶಿ ಮೀಸಲು 31.17 ಬಿಲಿಯನ್ ಡಾಲರ್‌ ನಷ್ಟು ಹೆಚ್ಚಾಗಿದೆ. RBI ಗವರ್ನರ್ ಶಕ್ತಿಕಾಂತ ದಾಸ್ ಪ್ರಕಾರ 561.16 ಶತಕೋಟಿ ಡಾಲರ್ ಮೌಲ್ಯದ ರಾಷ್ಟ್ರದ ವಿದೇಶಿ ವಿನಿಮಯ ಸಂಗ್ರಹವು‌ 2022–2023ರ ಸುಮಾರು ಒಂಬತ್ತು ತಿಂಗಳ ನಿರೀಕ್ಷಿತ ಆಮದುಗಳ ಮೌಲ್ಯದ ಮೊತ್ತವನ್ನು ಪಾವತಿಸಬಹುದಾದಷ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!