Tuesday, December 2, 2025

CINE | ನಾಗಚೈತನ್ಯ ಮದುವೆಗೆ ಬಂದಷ್ಟು ಹೇಟ್‌ ಕಮೆಂಟ್ಸ್‌ ಸಮಂತಾ ಮದುವೆಗ್ಯಾಕಿಲ್ಲ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಮಂತಾ ನಿನ್ನೆಯಷ್ಟೇ ನಿರ್ದೇಶಕ ರಾಜ್‌ ನಿದಿಮೋರು ಜೊತೆ ಸಪ್ತಪದಿ ತುಳಿದಿದ್ದಾರೆ. ನಟಿ ತಮ್ಮ ಪ್ರೀತಿಯನ್ನು ವರಿಸಿದ್ದಕ್ಕೆ ಸಿನಿಮಾ ದಿಗ್ಗಜರು ಕಂಗ್ರಾಟ್ಸ್‌ ಹೇಳಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್‌ ನಂತರ ಸಮಂತಾ ಅನಾರೋಗ್ಯಕ್ಕೆ ಒಳಗಾಗಿದ್ದರು. ಇಡೀ ಸೋಶಿಯಲ್‌ ಮೀಡಿಯಾ ಹಾಗೂ ಅಭಿಮಾನಿಗಳು ಸಮಂತಾ ಪರ ನಿಂತಿದ್ದರು. ಆದರೆ ಈಗ ನಾಗಚೈತನ್ಯ ಅಭಿಮಾನಿಗಳು ಸ್ಯಾಮ್‌ ವಿರುದ್ಧ ಮಾತನಾಡ್ತಿದ್ದಾರೆ.

ನಾಗಚೈತನ್ಯ ಹಾಗೂ ಸೋಭಿತಾ ಧುಲಿಪಾಲ ಮದುವೆ ವೇಳೆ ಎಲ್ಲರೂ ಸಮಂತಾಗೆ ಮೋಸ ಆದಂತೆ ಕಮೆಂಟ್ಸ್‌ ಮಾಡಿದ್ದರು. ನಾಗಚೈತನ್ಯ ದಂಪತಿಯನ್ನು ಕೆಟ್ಟವರಂತೆ ಬಿಂಬಿಸಿದ್ದರು. ಆದರೆ ಇದೀಗ ಸಮಂತಾ ಕೂಡ ಮದುವೆ ಆಗಿದ್ದಾರೆ. ಇಬ್ಬರದ್ದು ಕೂಡ ಎರಡನೇ ಮದುವೆಯಾಗಿದೆ. ರಾಜ್‌ ಮಾಜಿ ಪತ್ನಿ ಕೂಡ ಈ ಮದುವೆಯಿಂದ ಖುಷಿಯಿದ್ದಂತೆ ಕಾಣುತ್ತಿಲ್ಲ.

ನಾಗಚೈತನ್ಯ ಮದುವೆ ಬಗ್ಗೆ ಇದ್ದ ಕೆಟ್ಟ ಕಮೆಂಟ್ಸ್‌ ಸಮಂತಾ ಮದುವೆ ಬಗ್ಗೆ ಇಲ್ಲ. ಇಬ್ಬರು ಮಾಡಿದ್ದು ಒಂದೇ ಕೆಲಸ ಅಲ್ವಾ ಅನ್ನೋದು ನಾಗ ಫ್ಯಾನ್ಸ್‌ ಪ್ರಶ್ನೆಯಾಗಿದೆ.

error: Content is protected !!