ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಇದೇ ದಿನದಂದು ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ಮೃತಪಟ್ಟಿದ್ದರು.
ಅಗಲಿದ ಗೆಳೆಯನನ್ನು ಶೆಹನಾಜ್ ನೆನೆದಿದ್ದು, ಸಾಕಷ್ಟು ಇನ್ಸ್ಟಾಗ್ರಾಂ ಸ್ಟೋರಿಗಳನ್ನು ಹಾಕಿದ್ದಾರೆ.
ನಿನ್ನನ್ನು ಮತ್ತೆ ನೋಡುತ್ತೇನೆ 12-12 ಎನ್ನುವ ಕ್ಯಾಪ್ಷನ್‌ನೊಂದಿಗೆ ಬಿಳಿಯ ಹೃದಯದ ಇಮೊಜಿ ಹಾಕಿದ್ದಾರೆ. ಸಿದ್ಧಾರ್ಥ್ ಒಡನಾಟದ ಜೊತೆಗಿನ ಸಾಕಷ್ಟು ಫೋಟೊಗಳನ್ನು ಶೆಹನಾಜ್ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್‌ನಿಂದ ಆರಂಭವಾದಾಗಿನಿಂದ ಶೆಹ್‌ನಾಜ್ ಹಾಗೂ ಸಿದ್ಧಾರ್ಥ್ ಆತ್ಮೀಯ ಸ್ನೇಹಿತರಾಗಿದ್ದರು. ಇವರಿಬ್ಬರ ನಡುವೆ ಪ್ರೀತಿಯಾಗಿದ್ದು, ಬಿಗ್‌ಬಾಸ್‌ನಿಂದ ಹೊರಬಂದಮೇಲೂ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೇ ಕಾಣಿಸಿದ್ದರು.
ಸಿದ್ಧಾರ್ಥ್ ನಿಧನದ ನಂತರ ಬ್ರೇಕ್ ಪಡೆದ ಶೆಹನಾಜ್ ಇದೀಗ ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಸಾಕಷ್ಟು ಸಿನಿಮಾ ಹಾಗೂ ಶೋ ಗಳಲ್ಲಿ ಕಾಣಿಸುತ್ತಿದ್ದಾರೆ.