ಬರೋಬ್ಬರಿ 500 ವಿಮಾನಗಳ ಖರೀದಿಗೆ ಮುಂದಾದ ಏರ್ ಇಂಡಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಏರ್‌ಬಸ್ ಮತ್ತು ಬೋಯಿಂಗ್ ಎರಡರಿಂದಲೂ ಹತ್ತಾರು ಶತಕೋಟಿ ಡಾಲರ್‌ಗಳ ಮೌಲ್ಯದ 500 ಜೆಟ್‌ ಲೈನರ್‌ಗಳ ಖರೀದಿಗೆ ಐತಿಹಾಸಿಕ ಆರ್ಡರ್‌ಗಳನ್ನು ನೀಡಲು ಟಾಟಾ ಗ್ರೂಪ್‌ ನೇತೃತ್ವದ ಏರ್ ಇಂಡಿಯಾ ಸಿದ್ಧತೆ ನಡೆಸಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಈ ಆರ್ಡರ್ ನಲ್ಲಿ ಏರ್‌ಬಸ್ A350, ಬೋಯಿಂಗ್ 787 ಮತ್ತು 777 ಸೇರಿದಂತೆ 400 ಸಣ್ಣ ಗಾತ್ರದ ಜೆಟ್‌ಗಳು ಮತ್ತು 100 ಅಥವಾ ಅದಕ್ಕಿಂತ ಹೆಚ್ಚು ಅಗಲವಾದ ಜೆಟ್ ವಿಮಾನಗಳು ಸೇರಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಕೆಲವೇ ದಿನಗಳಲ್ಲಿ ಬೃಹತ್ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡಲಾಗುವುದು ಎಂದು ಮೂಲ ಹೇಳಿದೆ.
ಈ ಬಗ್ಗೆ ಏರ್‌ಬಸ್ ಮತ್ತು ಬೋಯಿಂಗ್ ಪ್ರತಿಕ್ರಿಯಿಸಲು ನಿರಾಕರಿಸಿವೆ. ಟಾಟಾ ಗ್ರೂಪ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!