ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದೊಂದಿಗೆ ತನ್ನ ಗಡಿ ಪರಿಸ್ಥಿತಿ ಪ್ರಸುತ್ತ ಸ್ಥಿರವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ಮಾಹಿತಿ ನಿನ್ನೆ ಹೊರಬಂದಿದ್ದು, ಇದರ ಬೆನ್ನಲ್ಲೇ ಈ ಹೇಳಿಕೆಯನ್ನು ಚೀನಾ ಸರ್ಕಾರ ನೀಡಿದೆ.
ಚೀನಾ-ಭಾರತದ ಗಡಿ ಪರಿಸ್ಥಿತಿಯು ಸ್ಥಿರವಾಗಿದೆ. ಎರಡೂ ಕಡೆಯ ಸಚಿವರು ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಗಡಿ ಸಮಸ್ಯೆಯ ಬಗ್ಗೆ ಅಡೆತಡೆಯಿಲ್ಲದ ಮಾತುಕತೆಯನ್ನು ನಡೆಸಿದ್ದೇವೆ. ಇಬ್ಬರು ಮಾಡಿದ ಸಹಿ ಮತ್ತು ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಈ ಮೂಲಕ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಡಿಸೆಂಬರ್ 9ರ ಬೆಳಗ್ಗೆ ತವಾಂಗ್ ಸೆಕ್ಟರ್‌ನಲ್ಲಿ ಗಡಿ ಕಾಯುತ್ತಿದ್ದ ಭಾರತ ಸೈನಿಕರನ್ನು ಚೀನಿ ಯೋಧರು ಕೆಣಕಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಸೈನಿಕರು ತಿರುಗೇಟು ನೀಡಿದ್ದು, ಎರಡು ಕಡೆ ಸೈನಿಕರ ಮಧ್ಯೆ ಘರ್ಷಣೆ ನಡೆದಿದೆ.