ಹೊಸದಿಗಂತ ವರದಿ, ವಿಜಯಪುರ:
ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾದ ಜಿಲ್ಲೆಯ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ.
ಮೃತಪಟ್ಟವರನ್ನು ಗೋಕಾಕ ಮೂಲದ ಸಂಜು ಹಿತಾರಗೌಡರ (33) ಹಾಗೂ ನಾಗರಾಜ ಯಡವಣ್ಣವರ (34) ಎಂದು ಗುರುತಿಸಲಾಗಿದೆ.
ಇವರು ಯಾವುದೊ ಕೆಲಸ ನಿಮಿತ್ತ ಕಲಬುರಗಿಗೆ ಹೋಗಿ, ಮರಳಿ ಗೋಕಾಕಗೆ ತೆರಳುತ್ತಿದ್ದಾಗ, ಈ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲಿ ಅಸುನೀಗಿದ್ದಾರೆ. ಇನ್ನೊರ್ವ ಯುವಕ ಆಶಿಫ್ ಮುಲ್ಲಾ (24) ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ