Friday, February 3, 2023

Latest Posts

ಬಿಜೆಪಿ ಜಿಲ್ಲಾ ನೂತನ ಕಾರ್ಯಾಲಯ ಕಾರ್ಯಕರ್ತರಿಗೆ ದೇಗುಲವಿದ್ದಂತೆ: ಶಾಸಕ ನೆಹರು ಓಲೇಕಾರ

ಹೊಸದಿಗಂತ ವರದಿ, ಹಾವೇರಿ:

ಬಿಜೆಪಿ ಜಿಲ್ಲಾ ನೂತನ ಕಾರ್ಯಾಲಯದ ಕಟ್ಟಡ ಕಾರ್ಯಕರ್ತರಿಗೆ ದೇಗುಲವಿದ್ದಂತೆ. ಈ ಭವನದಿಂದ ಕಾರ್ಯಕರ್ತರು ಸಮಾಜದ ಅಭಿವೃದ್ದಿಗೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ದಿಗೆ ಕೆಲಸ ನಿರ್ವಹಿಸಲಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಪ.ಜಾ, ಪ.ಪಂ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಹೇಳಿದರು.
ಗುರುವಾರ ನಗರದಲ್ಲಿ ನೂತವಾಗಿ ನಿರ್ಮಿಸಿರುವ ಬಿಜೆಪಿ ಜಿಲ್ಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಬಿಜೆಪಿ ಜಿಲ್ಲಾ ಕಾರ್ಯಾಲಯದ ಕಟ್ಟಡ ಬೃಹತ್ ಕಾರ್ಯಾಲಯವಾಗಿದೆ. ಇದರಿಂದ ಪಕ್ಷದ ಕಾರ್ಯ ಚಟುವಟಿಕೆಗಳು ಜರಗುವುದಕ್ಕೆ ಬಹಳ ಸುಗಮವಾಗಲಿದೆ ಎಂದರು.
ಇಂದು ಉದ್ಘಾಟನೆಯಾದ ರಾಜ್ಯದ ೧೦ ಕಾರ್ಯಾಲಯಗಳಲ್ಲಿ ಹಾವೇರಿಯಲ್ಲಿಯದೂ ಒಂದು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ. ಕರ್ನಾಟಕದಾದ್ಯಂತ ಸ್ವಂತ ಕಟ್ಟಡಗಳನ್ನು ಹೊಂದಿದ್ದು ಇದು ಕಾರ್ಯಕರ್ತರ ಇಚ್ಚಾಶಕ್ತಿಯ ಪ್ರತಿಕವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗ ಪ್ರಭಾರಿ ಹಾಗೂ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕಳೆದ ಎರಡು ವರ್ಷಗಳಿಂದ ಭವನದ ನಿರ್ಮಾಣ ಕಾಮಗಾರಿ ನಿರಂತವಾಗಿ ಸಾಗಿದೆ. ಇಂದು ರಾಜ್ಯದ ವಿವಿದ ಜಿಲ್ಲೆಯ ೧೦ ಕಾರ್ಯಾಲಯಗಳು ಉದ್ಘಾಟನೆಗೊಳ್ಳುತ್ತಿವೆ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ಕೊಪ್ಪಳದಿಂದ ವರ್ಚುವಲ್ ಮೂಲಕ ರಾಜ್ಯದ ವಿವಿದ ಭವವಗಳನ್ನು ಉದ್ಘಾಟಿಸಿದರು ಎಂದರು.
ಜಿಲ್ಲೆಯ ಭವನ ನಿರ್ಮಾಣ ಕಾರ್ಯಕರ್ತರ ಹತ್ತಾರು ವರ್ಷಗಳ ಕನಸಾಗಿತ್ತು, ನೂರಾರು ಕಾರ್ಯಕರ್ತರು ತನು ಮನ ಧನ ದಿಂದ ಭವನದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ ಮುಂಬರುವ ದಿನಗಳಲ್ಲಿ ಬಿಜೆಪಿ ಜಿಲ್ಲಾ ಭವನ ಕಾರ್ಯಕರ್ತರಿಗೆ ಶಕ್ತಿಕೇಂದ್ರವಾಗಿ ಮಾರ್ಪಾಡಾಗಲಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಕಾರ್ಯಾಲಯ ಉದ್ಘಾಟನೆಗೊಂಡಿರುವುದು ಕಾರ್ಯಕರ್ತರ ಸ್ಪುರ್ತಿಯನ್ನು ಇಮ್ಮಡಿಗೊಳಿಸಿದೆ ಜಿಲ್ಲೆಯ ಸಕಲ ಕಾರ್ಯಕರ್ತರು ಕಾರ್ಯಾಲಯಕ್ಕೆ ಬೇಟಿ ನೀಡಬೇಕು ಹಾಗೂ ಶೀಘ್ರದಲ್ಲಿ ಕಾರ್ಯಾಲಯದಲ್ಲಿ ಗ್ರಂಥಾಲಯ ನಿರ್ಮಾಣವಾಗುತ್ತದೆ. ರಾಷ್ಟ್ರೀಯ ವಿಚಾರಾದಾರಿಗಳಿಗೆ ಸಂಬಂದಿಸಿದಂತೆ ಪುಸ್ತಕಗಳ ಅಧ್ಯಯನಕ್ಕೆ ಗ್ರಂಥಾಲಯ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಭವನ ನಿರ್ಮಾಣವಾಗುತ್ತಿರುವುದು ಅತ್ಯಂತ ಸಂತಸದ ವಿಷಯ. ಸ್ವಂತ ಭವನ ಹೊಂದುವುದು ಕಾರ್ಯಕರ್ತರಿಗೆ ಸಂತೋಶ ತಂದಿದೆ, ಮುಂಬರುವ ದಿನಗಳಲ್ಲಿ ಬಿಜೆಪಿ ನೂತನ ಜಿಲ್ಲಾ ಭವನಗಳು ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಿಸಲು ಬೆನ್ನಲುಬಾಗಿ ನಿಲ್ಲುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ದರು.
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ವಿ.ಪ ಸದಸ್ಯ ಆರ್. ಶಂಕರ, ಮಾಜಿ ಶಾಸಕ ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ ಮಾತನಾಡಿದರು.
ವೇದಿಕೆಯಲ್ಲಿ ಮಂಜುನಾಥ ಓಲೇಕಾರ, ಪಾಲಾಕ್ಷಗೌಡ ಪಾಟೀಲ, ಭಾರತಿ ಜಂಬಗಿ, ಜಿಲ್ಲಾ ಪ್ರಭಾರಿ ಎನ್.ಎಲ್.ಕಲ್ಲೇಶ ಹಾಗೂ ಹಾವೇರಿ ಜಿಲ್ಲೆಯ ವಿವಿಧ ಮಂಡಲಗಳ ಪದಾಧಿಕಾರಿಗಳು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಸ್ವಾಗತಿಸಿದರು, ಕೃಷ್ಣಾ ಇಳಗೇರ ವಂದಿಸಿದರು, ರುದ್ರೇಶ ಚಿನ್ನಣ್ಣನವರ ಕಾರ್ಯಕ್ರಮ ನಿರುಪಿಸಿದರು.
ಬಿಜೆಪಿ ಜಿಲ್ಲಾ ನೂತನ ಜಿಲ್ಲಾ ಭವನದಲ್ಲಿ ನಸುಕಿನಲ್ಲಿನೇ ನವಗ್ರಹ, ಶಾಂತಿ ಹೋಮ ಕಾರ್ಯಕ್ರಮಗಳು ಜರುಗಿದವು. ಮುಂಜಾನೆ ಗೋ ಪೂಜೆಯನ್ನು ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ದಂಪತಿಗಳು ನೆರವೆರಿಸಿದರು. ತದನಂತರ ನವಗೃಹ ಪೂಜೆ ಹಾಗೂ ಶಾಂತಿ ಹೋಮವನ್ನು ನೆರವೆರಿಸಲಾಯಿತು. ಜನಸಂಘದ ಹಿರಿಯ ಕಾರ್ಯಕರ್ತರಾದ ಶ್ರೀ ರಿಂದ ನೆರವೆರಿಸಲಾಯಿತು. ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ವಿ.ಪ ಸದಸ್ಯ ಆರ್.ಶಂಕರ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ, ಭವನದ ವಿವಿಧ ಕೊಠಡಿಗಳನ್ನು ಉದ್ಘಾಟಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!