ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಹುಟ್ಟಿಗೆ ಕಾರಣ ಎನ್ನಲಾದ ಚೀನಾದಲ್ಲಿ ಕೊರೋನಾ ಮತ್ತೆ ತಲೆಯೆತ್ತಿದ್ದು, 2023ರ ವೇಳೆಗೆ ಒಂದು ಮಿಲಿಯನ್ ಸಾವು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.
ಇನ್ಸ್‌ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆಂಡ್ ಇವ್ಯಾಲ್ಯುಯೇಷನ್‌ನ ಹೊಸ ಪ್ರಕ್ಷೇಪಗಳ ಪ್ರಕಾರ ಚೀನಾದ ಕೋವಿಡ್ ನಿರ್ಬಂಧಗಳನ್ನು ಹಠಾತ್ ತೆಗೆದುಹಾಕಿದ್ದರಿಂದಾಗಿ 2023 ರವೇಳೆಗೆ ಕೊರೋನಾ ಸ್ಫೋಟ ಸಂಭವಿಸಲಿದೆ ಜೊತೆಗೆ ಮಿಲಿಯನ್‌ಗೂ ಹೆಚ್ಚು ಸಾವುಗಳು ಸಂಭವಿಸಬಹುದಾಗಿದೆ.
ಏಪ್ರಿಲ್ 1 ರ ಸುಮಾರಿಗೆ ಪ್ರಕರಣಗಳು ಉತ್ತುಂಗಕ್ಕೇರುತ್ತವೆ. ಚೀನಾದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಸೋಂಕಿಗೆ ಒಳಗಾಗುತ್ತಾರೆ. ಎನ್ನಲಾಗಿದೆ. ಕೋವಿಡ್ ನಿರ್ಬಂಧ ತೆಗೆದ ನಂತರ ಚೀನಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಯಾವುದೇ ಅಧಿಕೃತ ಕೋವಿಡ್ ಸಾವುಗಳ ಬಗ್ಗೆ ವರದಿ ಮಾಡಿಲ್ಲ.