50 ಲಕ್ಷ ಕಿಲೋ ಹಣ್ಣು-ತರಕಾರಿ ಸಾಗಾಟ: ಆನ್ಲೈನ್ ಫ಼ುಡ್ ಡೆಲಿವರಿ ನೆಚ್ಚಿಕೊಂಡಿದ್ದಾರೆ ಭಾರತೀಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿಕೊಂಡ ಆನ್‌ ಲೈನ್‌ ಫುಡ್‌ ಡೆಲಿವರಿ ಕ್ಷೇತ್ರವು ಈಗ ಕೋವಿಡ್‌ ನಂತರದ ಕಾಲಘಟ್ಟದಲ್ಲಿಯೂ ಬಹುತೇಕರ ಪಾಳಿಗೆ ನೆಚ್ಚಿನ ಶಾಪಿಂಗ್‌ ಆಪ್ಶನ್‌ ಆಘಿಯೇ ಮುಂದುವರೆದಿದೆ. ಆನ್ಲೈನ್‌ ವ್ಯವಸ್ಥೆ ನೀಡುವ ಆಯ್ಕೆಗಳು ಮತ್ತು ಇದರ ಅನುಕೂಲತೆಯಿಂದಾಗಿ ಈಗಲೂ ಕೂಡ ಬಹಳಷ್ಟು ಜನ ಭಾರತೀಯರು ಆನ್‌ಲೈನ್‌ನಲ್ಲಿ ಆಹಾರ ಮತ್ತು ದಿನಸಿಗಳನ್ನು ಆರ್ಡರ್ ಮಾಡುವುದನ್ನು ನೆಚ್ಚಿಕೊಂಡಿದ್ದಾರೆ ಎಂಬುದನ್ನು ಆಹಾರ ಡೆಲಿವರಿ ಕ್ಷೇತ್ರದ ದಿಗ್ಗಜ ಕಂಪನಿ Swiggy ಯ ಇತ್ತೀಚಿನ ವಾರ್ಷಿಕ ಟ್ರೆಂಡ್‌ಗಳ ವರದಿಯು ತೆರೆದಿಟ್ಟಿದೆ. ಐಸ್‌ ಕ್ಯೂಬ್‌ ನಿಂದ ಗುಲಾಬ್‌ ಜಾಮೂನ್‌ ವರೆಗೆ ಜನರು ಎಲ್ಲವನ್ನೂ ಆರ್ಡರ್ ಮಾಡುವುದರ ಮೇಲೆ ಹೇಗೆ ಅವಲಂಬಿತರಾಗಿದ್ದಾರೆ ಎಂಬುದನ್ನು ಈ ವರದಿ ವಿವರಿಸಿದೆ.

ಶುದ್ಧ ದೇಶೀ ಭಕ್ಷ್ಯಗಳಿಂದ, ಫಿರಂಗಿ ಫ್ಲೇವರ್‌ ಹಾಗೆಯೇ ಗಿಲ್ಟ್‌ ಫ್ರೀ ಆಪ್ಶನ್‌ ಗಳ ಮೂಲಕ ಜನರು ತಮ್ಮ ನೆಚ್ಚಿನ ಆಹಾರವನ್ನು ಆನ್ಲೈನ್‌ ನಲ್ಲಿ ಆರ್ಡರ್‌ ಮಾಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನಲ್ಲಿರುವ ತನ್ನ ಬಳಕೆದಾರರು ಮುಂಬೈ, ದೆಹಲಿ ಮತ್ತು ಚೆನ್ನೈ ಒಟ್ಟಾಗಿ ಮಾಡಿದ್ದಕ್ಕಿಂತ ಹೆಚ್ಚು ಐಸ್ ಕ್ಯೂಬ್‌ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಬಹಿರಂಗಪಡಿಸಿದೆ.

ಇವುಗಳಲ್ಲಿ ಬಿರಿಯಾನಿ ಅತ್ಯಂತ ಜನಪ್ರಿಯ ಡಿಶ್‌ ಆಗಿ ಸತತ ಏಳನೇ ವರ್ಷವೂ ಹೊರಹೊಮ್ಮಿದೆ. ಈ ವರ್ಷ ತನ್ನ ಬಳಕೆದಾರರು ಪ್ರತಿ ಸೆಕೆಂಡಿಗೆ 2.28 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಸ್ವಿಗ್ಗಿ ಹೇಳಿದೆ. ಡೆಸರ್ಟ್‌ ಗಳಲ್ಲಿ ಗುಲಾಬ್‌ ಜಾಮೂನ್‌ ಅತ್ಯಂತ ಜನಪ್ರಿಯತೆ ಗಳಿಸಿದೆ. ಇನ್ನುಳಿದಂತೆ ಮಸಾಲಾದೋಸಾ, ಚಿಕನ್ ಫ್ರೈಡ್ ರೈಸ್, ಬಟರ್ ನಾನ್, ವೆಜ್ ಫ್ರೈಡ್ ರೈಸ್ ಮತ್ತು ತಂದೂರಿ ಚಿಕನ್ ಗಳೂ ಭಾರೀ ಬೇಡಿಕೆಯಲ್ಲಿರುವ ತಿನಿಸುಗಳಾಗಿವೆ. ಇನ್ನು ಸಮೋಸಾದಲ್ಲಿ ಆಲೂ ಇರುವವರೆಗೂ ಚಹವನ್ನು ಜನರ ಇಷ್ಟಪಡದಿರಲಾರರು ಎಂಬುದು ವರದಿಯಲ್ಲಿ ಬಹಿರಂಗಗೊಂಡಿದೆ.

ಇನ್ನು ಗ್ರೋಸರಿ ವಿಭಾಗದಲ್ಲಿ ಜನರು ಆರೋಗ್ಯಕರ ಆಯ್ಕೆಗೆ ಒತ್ತು ನೀಡಿದ್ದು ಸ್ವಿಗ್ಗಿ ವರ್ಷದಲ್ಲಿ 50 ಲಕ್ಷ ಕಿಲೋಗಳಷ್ಟು ಸಾವಯವ ಹಣ್ಣುಗಳು ಮತ್ತು ತರಕಾರಿಗಳನ್ನು ವಿತರಿಸಿದೆ ಎಂದು ಹೇಳಿದೆ.

ಭಾರತೀಯರು ಈ ವರ್ಷ ಸ್ವಲ್ಪ ಸೋಮಾರಿಗಳಾಗಿದ್ದಾರೆ ಎಂಬಂಶವನ್ನೂ ಸ್ವಿಗೀ ತೆರೆದಿಟ್ಟಿದೆ. ಏಕೆಂದರೆ ಸ್ವಿಗ್ಗಿ 50 ಮೀಟರ್‌ ಅಂತರದಲ್ಲಿಯೂ ಇನ್ಸ್ಟಾ ಮಾರ್ಟ್‌ ಆರ್ಡರ್‌ ಅನ್ನು ಡೆಲಿವರಿ ಮಾಡಿದೆ. ಬೆಂಗಳೂರಿಗರು ದಿನಸಿಗಾಗಿ 16.6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!