ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಡುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುವುದು ತುಂಬಾ ಅಪಾಯಕಾರಿ. ಓಡುತ್ತಿರುವ ರೈಲು ಹತ್ತಲು ಯತ್ನಿಸಿ, ಹಲವರು ಜಾರಿ ಬಿದ್ದು ಕೆಲವರು ಪ್ರಾಣ ಕಳೆದುಕೊಂಡಿರುವ ಘಟನೆಗಳೂ ಇವೆ. ಇಷ್ಟಲ್ಲಾ ಆದರೂ ಕೆಲವರಿಗೆ ಬುದ್ದಿ ಬರುವುದಿಲ್ಲ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಮೈಹಾರ್ ರೈಲು ನಿಲ್ದಾಣದಲ್ಲಿ ಇಂತಹದೊಂದು ಘಟನೆ ನಡೆದಿದೆ. ಆ ವ್ಯಕ್ತಿಗೆ ಆಯುಷ್ಯ ಗಟ್ಟಿ ಅಂತ ಕಾಣತ್ತೆ ಅದೃಷ್ಟವಶಾತ್ ಬಚಾವಾಗಿದ್ದಾನೆ.
ಚಲಿಸುತ್ತಿದ್ದ ರೈಲನ್ನು ಹತ್ತುವ ಪ್ರಯತ್ನದಲ್ಲಿ ಪ್ರಯಾಣಿಕ ಕಾಲು ಜಾರಿ ಬಿದ್ದರು. ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡ ಕೂಡಲೇ ಅಲ್ಲೇ ಸ್ಥಳದಲ್ಲಿದ್ದ ಆರ್ಪಿಎಫ್ ಜವಾನ ತಕ್ಷಣ ಪ್ರಯಾಣಿಕನನ್ನು ಹಿಂದಕ್ಕೆ ಎಳೆದು ಆತನ ಪ್ರಾಣ ರಕ್ಷಿಸಿದ್ದಾರೆ.
ಇದೆಲ್ಲ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#MadhyaPradesh के मैहर रेलवे स्टेशन पर #RPF के जवान की सतर्कता से बची एक शख्स की जान! दरअसल स्टेशन पर शख्स चलती ट्रेन में चढ़ने का प्रयास करते समय फिसलकर प्लेटफार्म और गाड़ी के बीच में गिरने वाला ही था कि जवान ने बाहर खींचकर जान बचाई। pic.twitter.com/KOeEBmsyot
— News Tak (@newstakofficial) December 17, 2022