ವಿಶ್ವ ಕಪ್ 2022 ಗೋಲ್ಡನ್ ಬೂಟ್ ಗೆದ್ದ ಕೈಲಿಯನ್ ಎಂಬಪ್ಪೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೆನಾಲ್ಟಿ ಶೂಟ್-ಔಟ್‌ನಲ್ಲಿ 4-2 ಗೋಲುಗಳ ಅಂತರದಿಂದ ಅರ್ಜೆಂಟೀನಾ ವಿರುದ್ಧ ಸೋತ ಫ್ರಾನ್ಸ್‌ ವಿಶ್ವಕಪ್‌ ಎತ್ತುವ ಕನಸು ಭಗ್ನವಾಗಿದೆ. ಆದರೆ ಫ್ರಾನ್ಸ್ ಸ್ಟಾರ್ ಸ್ಟ್ರೈಕರ್ 23 ವರ್ಷದ ಕೈಲಿಯನ್ ಎಂಬಪ್ಪೆ ತನ್ನ ವಿಶ್ವ ಶ್ರೇಷ್ಠ ಆಟದಿಂದ ವಿಶ್ವದ ಹೃದಯ ಗೆದ್ದಿದ್ದಾರೆ. ಅರ್ಜೆಂಟೀನಾ ವಿರುದ್ಧ ಭಾನುವಾರದ ಫೈನಲ್‌ನಲ್ಲಿ ಮೂರು ಗೋಲುಗಳನ್ನು ಗಳಿಸಿದ ನಂತರ ಎಂಬಾಪೆ 2022 ರ ಫಿಫಾ ವಿಶ್ವಕಪ್ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪಂದ್ಯಾವಳಿಯುದ್ದಕ್ಕೂ ಅದ್ಭುತ ಆಟವಾಡಿರುವ ಎಂಬಾಪೆ ಆಡಿದ ಏಳು ಪಂದ್ಯಗಳಲ್ಲಿ ಎಂಟು ಗೋಲು ಸಿಡಿಸಿದ್ದಾರೆ.
ಲಿಯೋನೆಲ್ ಮೆಸ್ಸಿ ಏಳು ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಫೈನಲ್‌ಗೂ ಮುನ್ನ ಕೈಲಿಯನ್ ಎಂಬಪ್ಪೆ ಮತ್ತು ಲಿಯೋನೆಲ್ ಮೆಸ್ಸಿ ತಲಾ 5 ಗೋಲುಗಳನ್ನು ಗಳಿಸುವ ಮೂಲಕ ಗೋಲ್ಡನ್ ಬೂಟ್ ರೇಸ್‌ನಲ್ಲಿ ಸಮಬಲದಲ್ಲಿದ್ದರು. ಲಿಯೋನೆಲ್ ಮೆಸ್ಸಿ ಅಂತಿಮ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸಿದರೆ, ಎಂಬಪ್ಪೆ ಹ್ಯಾಟ್ರಿಕ್ ಗಳಿಸುವ ಮೂಲಕ ಗೋಲ್ಡನ್‌ ಬೂಟ್‌ ತಮ್ಮದಾಗಿಸಿಕೊಂಡರು.
ಪಂದ್ಯವು 3-3 ರಲ್ಲಿ ಸಮನಾದ ನಂತರ ಪೆನಾಲ್ಟಿ ಕಿಕ್‌ಗಳಲ್ಲಿ (4-2) ಅರ್ಜೆಂಟೀನಾ ಅತಿರೋಚಕ ಫೈನಲ್‌ನಲ್ಲಿ ಜಯಗಳಿಸಿತು. ಎಂಬಪ್ಪೆ ಅವರು ಗೋಲ್ಡನ್ ಬೂಟ್ ಗೆದ್ದ ಮೊದಲ ಫ್ರೆಂಚ್ ಆಟಗಾರರಾಗಿದ್ದಾರೆ. ಜೊತೆಗೆ ಅತ್ಯಂತ ಕಿರಿಯ ವಯಸ್ಸಿನ ಗೋಲ್ಡನ್ ಬೂಟ್ ವಿಜೇತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!