ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿ ಬಾಂಬ್ ಇಡಲಾಗಿದೆ ಎಂಬ ವರದಿ ಸೋಮವಾರ ರಾತ್ರಿ ಗೊಂದಲ ಸೃಷ್ಟಿಸಿತ್ತು. ಮಾಹಿತಿ ಲಭಿಸಿದ ತಕ್ಷಣ ರೈಲ್ವೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಪೊಲೀಸ್ ತಂಡ ಕಾರ್ಯಾಚರಣೆಗೆ ಇಳಿದಿದೆ. ಶೋಧ ಕಾರ್ಯಾಚರಣೆಗಿಳಿದು ತನಿಖೆಯನ್ನು ಪ್ರಾರಂಭಿಸಿದರು.
ಬಳಿಕ ಈ ಕುರಿತು ಮಾತನಾಡಿದ ಪಾಟ್ನಾ ರೈಲ್ವೆ ಜಂಕ್ಷನ್, ಸ್ಟೇಷನ್ ಇನ್ ಚಾರ್ಜ್ ರಂಜಿತ್ ಕುಮಾರ್, ”ಯಾವುದೇ ಬಾಂಬ್ ಪತ್ತೆಯಾದ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ, ಈ ಬಗ್ಗೆ ನಾವು ವಿಶೇಷ ತನಿಖೆ ನಡೆಸುತ್ತಿದ್ದೇವೆ ಎಂದರು.
ಇದೊಂದು ವರದಂತಿ ಕರೆ ಇರಬಹುದಾದರೂ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ತನಿಖೆ ಕೈಗೊಂಡಿದ್ದಾರೆ. ಬಾಂಬ್ ಬೆದರಿಕೆ ಸತ್ಯಾಸತ್ಯತೆ ಕಂಡುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು. ಕೆಲಕಾಲ ಜಂಕ್ಷನ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.