ಆಕ್ರಮಣಕಾರಿ ಚೀನಾ ಎದುರಿಸಲು ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಚೀನಾದ ಆಕ್ರಮಣವನ್ನು ಎದುರಿಸಲು ಕೇಂದ್ರ ಸರ್ಕಾರವು ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಭರದಿಂದ ನಡೆಸುತ್ತಿದೆ. ಪಶ್ಚಿಮ ಅಸ್ಸಾಂ ಮತ್ತು ಪಶ್ಚಿಮ ಅರುಣಾಚಲ ಪ್ರದೇಶದ ಪ್ರಮುಖ ಗಡಿ ಪ್ರದೇಶಗಳಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ಎಲ್ಲಾ ರಸ್ತೆ ಜಾಲಗಳನ್ನು ಅಭಿವೃದ್ಧಿಪಡಿಸುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳು, ಏಕ ಪಥದ ರಸ್ತೆಗಳು, ದ್ವಿಪಥ ರಸ್ತೆಗಳು ಮತ್ತು ಇತರ ರೀತಿಯ ರಸ್ತೆಗಳಿದದು, ಅವುಗಳ ಮೂಲಕ ತವಾಂಗ್ ಜಿಲ್ಲೆಯ ದೂರದ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇದು ಈ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ‘ಪ್ರಾಜೆಕ್ಟ್ ವರ್ತಕ್’ ನ ಮುಖ್ಯ ಇಂಜಿನಿಯರ್, ಬ್ರಿಗ್ ರಾಮನ್ ಕುಮಾರ್ ಹೇಳಿದ್ದಾರೆ.

ಚಳಿಗಾಲದಲ್ಲಿ ಭಾರೀ ಹಿಮಪಾತದಿಂದಾಗಿ ವಾಹನ ಸಂಚಾರ ಕಷ್ಟವಾಗುವುದರಿಂದ ಸೆಲಾ ಸುರಂಗ ಮತ್ತು ನೆಚಿಪು ಸುರಂಗಗಳು ನಿರ್ಮಾಣ ಹಂತದಲ್ಲಿವೆ. ಒಮ್ಮೆ ಸುರಂಗ ಪೂರ್ಣಗೊಂಡರೆ, ಚಳಿಗಾಲದಲ್ಲಿ ಜನರು ಅದರ ಮೂಲಕ ಹಾದುಹೋಗಲು ಸಾಧ್ಯವಾಗುತ್ತದೆ. ಜೊತೆಗೆ ಮಿಲಿಟರಿ ಮತ್ತು ನಾಗರಿಕ ವಾಹನಗಳ ಸಂಚಾರವು ಹೆಚ್ಚು ಸುಗಮವಾಗಿರುತ್ತದೆ. ಇದು ಪ್ರದೇಶದಲ್ಲಿ ಮೂಲಸೌಕರ್ಯ ಮಾತ್ರವಲ್ಲದೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡುತ್ತದೆ ಎಂದರು.

ರಸ್ತೆ ಸಂಪರ್ಕ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಹೊರತಾಗಿ, ತವಾಂಗ್ ಮತ್ತು ಅರುಣಾಚಲ ಪ್ರದೇಶದ ಇತರ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಬಲಪಡಿಸಲು ಸರ್ಕಾರವು ಕೆಲಸ ಮಾಡುತ್ತಿದೆ. ತವಾಂಗ್ ಮತ್ತು ತವಾಂಗ್ ಜಿಲ್ಲೆಯ ಇತರ ಗಡಿ ಪ್ರದೇಶಗಳಲ್ಲಿ LAC ಉದ್ದಕ್ಕೂ ಹೆಚ್ಚಿನ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗಿದೆ.

ಡಿಸೆಂಬರ್ 13 ರಂದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ಟ್ಸೆ ಪ್ರದೇಶದಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲು ಪ್ರಯತ್ನಿಸಿದ ಬಗ್ಗೆ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. ಭಾರತೀಯ ಸೈನಿಕರ ಧೈರ್ಯದಿಂದಾಗಿ ಕುತಂತ್ರಿ ಚೀನೀ ಸೈನಿಕರನ್ನು ಹಿಮ್ಮೆಟಿಸುವಲ್ಲಿ ಯಶಸ್ವಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!