ಹೊಸದಿಗಂತ ಡಿಜಿಟಲ್ ಡೆಸ್ಕ್
ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡ ಭಾರತದಲ್ಲಿ ಟಿ 20 ಪಂದ್ಯಗಳ ಪ್ರವಾಸದಲ್ಲಿದೆ. ಅತಿಥಿಗಳು ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು 3-1 ಅಂತರದ ಮುನ್ನಡೆ ಸಾಧಿಸಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಆಸೀಸ್ ಮಹಿಳಾ ಕ್ರಿಕೆಟಿಗರು ಮೈದಾನದ ಆಚೆಗೆ ಭಾರತೀಯ ಸಂಪ್ರದಾಯಗಳನ್ನು ಆನಂದಿಸುತ್ತಿದ್ದಾರೆ. ಅಂತಹ ಒಂದು ಘಟನೆಯಲ್ಲಿ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಅಮಂಡಾ ವೆಲ್ಲಿಂಗ್ಟನ್ ಅವರು ಸಾಂಪ್ರದಾಯಿಕ ಭಾರತೀಯ ಸೀರೆಯನ್ನು ಧರಿಸಿ ಕಂಗೊಳಿಸಿದ್ದಾರೆ. ಆ ಚಿತ್ರವನ್ನು ಅವರು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.
Wello in a saree 💃 if I’m wearing it wrong please tell me 🤣 what do we think? pic.twitter.com/ARL9K6TEFt
— Amanda Wellington (@amandajadew) December 19, 2022
ಗುಲಾಬಿ ಬಣ್ಣದ ಸೀರೆಯುಟ್ಟು ಕನ್ನಡಿ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಕೈಗಳಿಗೆ ಗೋರಂಟಿ ಹಾಕಿಕೊಂಡು ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಚಿತ್ರದ ಜೊತೆಗೆ “ಈ ಸೀರೆಯಲ್ಲಿ ನಾನು ಹೇಗೆ ಕಾಣ್ತೀನಿ.. ತಪ್ಪಾಗಿ ಧರಿಸಿದ್ದೀನಾ ಪ್ಲೀಸ್ ಹೇಳಿ..ʼ ಎಂದು ಅಬಿಮಾನಿಗಳನ್ನು ಕೇಳಿದ್ದಾರೆ. ಅವರ ಟ್ವೀಟ್ ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಟ್ವಿಟ್ ಗೆ 57,000 ಲೈಕ್ ಮತ್ತು ಎರಡು ಸಾವಿರ ರೀಟ್ವೀಟ್ ಆಗಿದೆ.
“ಅತ್ಯಂತ ಸುಂದರವಾಗಿ ಕಾಣುತ್ತಿದ್ದೀರಿ.. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ,” ಒಬ್ಬ ಬಳಕೆದಾರ ಬರೆದಿದ್ದಾರೆ. ನಾಲ್ಕನೇ ಬಳಕೆದಾರರು, “ನೀವು ಭಾರತೀಯ ಸೀರೆಯಲ್ಲಿ ರಾಣಿಯಂತೆ ಕಾಣುತ್ತಿದ್ದೀರಿ” ಹೊಗಳಿದ್ದಾರೆ. ಸುಂದರವಾಗಿದೆ, ನೀವು ಅದನ್ನು ಮೊದಲ ಬಾರಿಗೆ ನೀವೇ ಧರಿಸಿದ್ದರೆ ನೀವು ನಿಜಕ್ಕೂ ಗ್ರೇಟ್. ನಮ್ಮಲ್ಲಿ ಕೆಲವರು ಅದನ್ನು ಹಲವಾರು ಬಾರಿ ಕಲಿತ ನಂತರವೂ ಮಾಡಲು ವಿಫಲರಾಗುತ್ತೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ.