ಆಫ್ಘನ್‌ನ ವಿಶ್ವವಿದ್ಯಾಲಯಗಳಿಗೆ ಹೆಣ್ಣು ಮಕ್ಕಳ ಪ್ರವೇಶ ಬ್ಯಾನ್ ಮಾಡಿದ ತಾಲಿಬಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದ ವಿಶ್ವವಿದ್ಯಾಲಯಗಳಿಗೆ ಹೆಣ್ಣು ಮಕ್ಕಳು ಪ್ರವೇಶಿಸುವಂತಿಲ್ಲ ಎಂದು ತಾಲಿಬಾನ್ ಹೇಳಿದೆ.
ಹಿಂದಿನಿಂದಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ತಕರಾರು ಎತ್ತುತ್ತಿರುವ ತಾಲಿಬಾನ್, ಇದೀಗ ವಿಶ್ವವಿದ್ಯಾಲಯಕ್ಕೆ ಹೆಣ್ಣುಮಕ್ಕಳ ಎಂಟ್ರಿಯನ್ನೇ ಬ್ಯಾನ್ ಮಾಡಿದೆ.

ತಾಲಿಬಾನ್ ಸರ್ಕಾರ ಸಭೆ ನಡೆಸಿದ್ದು, ಕಡೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಮುಂದಿನ ಪ್ರಕಟಣೆವರೆಗೆ ಯಾವ ಹೆಣ್ಣುಮಕ್ಕಳು ವಿಶ್ವವಿದ್ಯಾಲಯ ಪ್ರವೇಶಿಸುವಂತಿಲ್ಲ ಎಂದು ತಾಲಿಬಾನ್ ಆದೇಶ ಹೊರಡಿಸಿದೆ. ಈ ಹಿಂದೆ ಎಲ್ಲ ನಾಗರಿಕ ಸೇವೆಯಿಂದ ಮಹಿಳೆಯರನ್ನು ವಜಾಗೊಳಿಸಿದ ಸರ್ಕಾರ ಇದೀಗ ಹೆಣ್ಣುಮಕ್ಕಳ ಶಿಕ್ಷಣವನ್ನೇ ಕಿತ್ತುಕೊಳ್ಳಲು ಹೊರಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!